ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿ ಚಿನ್ನ ಗೆದ್ದ ಶೂಟರ್ ಅವನಿ ಲೇಖರಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ ಮತ್ತು “ಐತಿಹಾಸಿಕ ಸಾಧನೆ” ಯನ್ನು ಶ್ಲಾಘಿಸಿದ್ದಾರೆ.

“ಈ ಐತಿಹಾಸಿಕ ಸಾಧನೆಗಾಗಿ ಅಭಿನಂದನೆಗಳು ಅವನಿ ಲೇಖರ. ನೀವು ಯಶಸ್ಸಿನ ಹೊಸ ಉತ್ತುಂಗಗಳನ್ನು ಏರುತ್ತಿರಿ ಮತ್ತು ಇತರರನ್ನು ಪ್ರೇರೇಪಿಸುತ್ತಿರಲಿ. ನನ್ನ ಶುಭಾಶಯಗಳು” ಎಂದು ಮೋದಿ ಟ್ವೀಟಿಸಿದ್ದಾರೆ.

ಶೂಟರ್ ಶ್ರೀಹರ್ಷ ದೇವರಡ್ಡಿ ತಮ್ಮ ವಿಭಾಗದಲ್ಲಿ ಚಿನ್ನ ಗೆದ್ದಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜೂನ್ 8 ರಂದು ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್  ಎಸ್ ಎಚ್1 ನಲ್ಲಿ ಲೇಖರಾ ವಿಶ್ವ ದಾಖಲೆಯ 250.6 ಸ್ಕೋರ್‌ನೊಂದಿಗೆ ಚಿನ್ನ ಗೆದ್ದಿದ್ದಾರೆ.

20 ವರ್ಷದ ಅವನಿ ಲೇಖರಾ ಈ ಹಿಂದಿನ ತನ್ನದೇ 249.6 ರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಮತ್ತು 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.