ಕಾರ್ಕಳ: ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರ

ದಿನಾಂಕ : ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಜು.17 ಮತ್ತು19 ರಂದು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್‌ ರಾಜ್‌ ಗಣೇಶ್‌ ಕಾಮತ್‌ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ಕಾಲೇಜಿನಲ್ಲಿ ಒದಗಿಸುವ ಈ ಕೋರ್ಸ್‌ ಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದರು. ಖ್ಯಾತ ಕಂಪೆನಿ ಸೆಕ್ರೆಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೆಟರಿ ಕಾರ್ಯವೈಖರಿ […]

ಉಡುಪಿಯಲ್ಲಿ ಮತ್ತೊಂದು ಕೊರಗಜ್ಜನ‌ ಪವಾಡಗಳ ಅಚ್ಚರಿ ಘಟನೆ

 ಕುಂದಾಪುರ: ಉಡುಪಿಯಲ್ಲಿ ಮತ್ತೊಂದು ಕೊರಗಜ್ಜನ‌ ಪವಾಡ ಬೆಳಕಿಗೆ ಬಂದಿದೆ. ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಪವಾಡಗಳ ಹಿನ್ನೆಲೆಯಲ್ಲಿ ಆಗಾಗ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ.‌ ಉಡುಪಿಯ ಕುಂದಾಪುರ ಬೇಳೂರು ಕೇದೂರು ಸಮೀಪದ ದಬ್ಬೆಕಟ್ಟೆಯಲ್ಲಿ 3 ಗಂಟೆ ರಾತ್ರಿಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದರು. ನಿನ್ನೆ ರಾತ್ರಿ 3 ಗಂಟೆಗೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮನೆಯೊಂದರಲ್ಲಿ ಮಲಗಿದ್ದ ಹೆಣ್ಣು ಮಗುವೊಂದು ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರ ನಿದ್ದೆ […]

ಸ್ವಂತ ಮಗುವಿನ ರೀತಿ ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ: ಬಂಡೀಪುರದಿಂದ ತಾಯಿಯಿಂದ ಬೇರ್ಪಟ್ಟಿರುವ ಮರಿಆನೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾಗೆ ‘ವೇದಾ’ ಮೊದಲನೇ ಹೆಣ್ಣು ಮಗಳು. ಈ ವೇದಾ ಮತ್ಯಾರೂ ಅಲ್ಲ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆಮರಿ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯಾ ಅವರ ಮಡಿಲು ಸೇರಿರುವ ವೇದಾಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ […]

ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ‘ದ್ವೇಷಪೂರಿತ, ಹಿಂಸಾತ್ಮಕ ಪೋಸ್ಟ್‌ಗಳು ಹೆಚ್ಚುತ್ತಿವೆ’ ಎಂಬ ವರದಿಯನ್ನು ನಿರಾಕರಿಸಿದ ಟ್ವಿಟರ್​​​ ಸಿಇಒ

ನವದೆಹಲಿ: ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ಟ್ವಿಟರ್​ನಲ್ಲಿ ಹಾನಿಕಾರಕ ವಿಷಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ. ಶೇಕಡ 99 ರಷ್ಟು ಹೆಚ್ಚು ಕಂಟೆಂಟ್ ಬಳಕೆದಾರರು ಮತ್ತು ಜಾಹೀರಾತುದಾರರು ಟ್ವಿಟರ್​ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ಪೋಸ್ಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಎಲೋನ್ ಮಸ್ಕ್ ಒಡೆತನದ ಪ್ಲಾಟ್‌ಫಾರ್ಮ್‌ನಲ್ಲಿ ದ್ವೇಷಪೂರಿತ, ಹಿಂಸಾತ್ಮಕ ಮತ್ತು ತಪ್ಪಾದ ಮಾಹಿತಿಯ ಹರಡುವಿಕೆ ಹೆಚ್ಚಾಗಿ ಕಂಡುಬಂದಿದೆ ಎಂಬ ವರದಿಯನ್ನು ಟ್ವಿಟರ್ ಸಿಇಒ ಲಿಂಡಾ ಯಾಕರಿನೊ ನಿರಾಕರಿಸಿದ್ದಾರೆ. ಟ್ವಿಟರ್ “ಪ್ರಗತಿ ಸಾಧಿಸುತ್ತಿದೆ” ಮತ್ತು ಬಳಕೆದಾರರ […]

ಕೃಷಿ ವಿವಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ

ಶಿವಮೊಗ್ಗ:ಜುಲೈ 21ರಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯ 8ನೇ ಘಟಿಕೋತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕುಲಪತಿ ಡಾ.ಆರ್.ಸಿ.ಜಗದೀಶ್ ಮಾಹಿತಿ ನೀಡಿದರು. ”ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾನಿಲಯದಲ್ಲಿ ಜುಲೈ 21ರಂದು ಜರುಗಲಿರುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. […]