ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಳಿ ಮಾನವ ಅಸ್ಥಿಪಂಜರ ಪತ್ತೆ; ತನಿಖೆ ಪ್ರಾರಂಭ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಾಡಿನಲ್ಲಿ ಮಾನವ ಅಸ್ಥಿಪಂಜರದ ಕುರುಹು ಪತ್ತೆಯಾಗಿದ್ದು, ಸ್ಥಳೀಯ ಪರಿಸರದಲ್ಲಿ ಭಯ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮೀಸಲು ಅರಣ್ಯಕ್ಕೆ ಕಟ್ಟಿಗೆ ತರಲೆಂದು ತೆರಳಿದ ಸ್ಥಳೀಯರಿಗೆ ಇಲ್ಲಿ ಮಾನವ ತಲೆಬುರುಡೆ ಹಾಗೂ ಅವಶೇಷಗಳು ಪತ್ತೆಯಾಗಿದ್ದು, ಈ ಬಗ್ಗೆ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದ ವೇಳೆ ಅಸ್ಥಿಪಂಜರ ಪತ್ತೆಯಾದ ಸ್ಥಳದ ಪಕ್ಕದಲ್ಲಿನ ಮರದ ಕೊಂಬೆಯೊಂದರಲ್ಲಿ ಚೀಲವೊಂದು ಪತ್ತೆಯಾಗಿದೆ. ಈ […]

ಚಿಕ್ಕಮಗಳೂರು: ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಅಗ್ನಿ ಅವಘಡ; 5 ಲಕ್ಷ ರೂ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮ

ಚಿಕ್ಕಮಗಳೂರು: ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ ಐದು ಲಕ್ಷ ರೂಪಾಯಿ ಭಸ್ಮವಾಗಿದೆ. ಐಜಿ ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ […]

ಚದುರಂಗದಲ್ಲಿ ಮತ್ತೊಮ್ಮೆ ಭಾರತದ ಪಾರುಪತ್ಯ: ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ ಗೆದ್ದು ಇತಿಹಾಸ ನಿರ್ಮಿಸಿದ ಅತಿ ಕಿರಿಯ ಆಟಗಾರ ಡಿ ಗುಕೇಶ್

ನವದೆಹಲಿ: ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಚೆಸ್ ಆಟಗಾರರಾಗಿದ್ದಾರೆ. ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಹಿಕಾರು ನಕಮುರಾ ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ಗುಕೇಶ್ ಸಂಭವನೀಯ 14 ಅಂಕಗಳಲ್ಲಿ ಒಂಬತ್ತು ಅಂಕಗಳನ್ನು ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ಗಾಗಿ ಅವರು ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ […]

ನೇಹಾ ಪೋಷಕರ ಆಗ್ರಹದಂತೆ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: ಗುರುವಾರ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ದುಷ್ಕರ್ಮಿಯಿಂದ ಅಮಾನುಷವಾಗಿ ಕೊಲೆಗೀಡಾದ ವಿದ್ಯಾರ್ಥಿನಿ ನೇಹಾ ಸಾವಿಗೆ ಕಂಬನಿ ಮಿಡಿದಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ದುಷ್ಕರ್ಮಿಯ ಕೃತ್ಯವನ್ನು ಖಂಡಿಸಿದ್ದಾರೆ. ಭವಿಷ್ಯದ ಕನಸುಗಳಿಗಾಗಿ ಬಾಳಿ ಬದುಕಬೇಕಾಗಿದ್ದ, ಶಿಕ್ಷಣಾಭ್ಯಾಸ ಮಾಡುತ್ತಿದ್ದ ನೇಹಾ ಹತ್ಯೆ ಮನಸ್ಸಿಗೆ ನೋವು ತಂದಿದೆ. ಆಕೆಯನ್ನು ಅಮಾನುಷವಾಗಿ ಕೊಂದಿರುವ ವಿಕೃತ ಹಾಗೂ ಕ್ರೂರ ಮನಸ್ಥಿತಿಯ ಕೊಲೆಗಾರನ ಕೃತ್ಯವನ್ನು ಸುಸಂಸ್ಕೃತ ನಾಗರಿಕ ಸಮಾಜದ ಯಾರೂ ಒಪ್ಪುವುದಿಲ್ಲ. ಆತನ ಕೃತ್ಯಕ್ಕೆ ಕಾನೂನು ಕ್ರಮದಲ್ಲಿ ಕಠಿಣ ಶಿಕ್ಷೆಯಾಗಬೇಕು. […]

ಮಲ್ಪೆ: ಸಮುದ್ರದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಮೃತ್ಯು

ಉಡುಪಿ: ಮಲ್ಪೆ ಬೀಚ್ ನಲ್ಲಿ ಸ್ನಾನಕ್ಕಿಳಿದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ. ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿ ಸ್ನೇಹಿತರೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಸಮುದ್ರಕ್ಕಿಳಿದು ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೂಡಲೇ ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು […]