ಉಡುಪಿ:ಜನನಿ ಎಂಟರ್ ಪ್ರೈಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಬ್ರಹ್ಮಾವರ ಹಾಗೂ ಕುಂದಾಪುರದ ಜನನಿ ಎಂಟರ್ಪ್ರೈಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಮ್ಯಾನೇಜರ್ ◾ಸೇಲ್ಸ್ ಎಕ್ಸಿಕ್ಯೂಟಿವ್ ◾ಬಿಲ್ಲಿಂಗ್ ◾ಡ್ರೈವರ್ಸ್ ◾ಡೆಲಿವರಿ ಎಕ್ಸಿಕ್ಯೂಟಿವ್ ◾ಟೆಲಿಕಾಲರ್ ◾ಸರ್ವಿಸ್ ಟೆಕ್ನಿಷಿಯನ್ ಮಾಹಿತಿಗಾಗಿ ಸಂಪರ್ಕಿಸಿ: 819707 0262

ಉಡುಪಿ:ಎಸ್.ಎಸ್.ಎಲ್.ಸಿ ಪರೀಕ್ಷೆ-2 : ಶುಲ್ಕ ವಿನಾಯಿತಿ

ಉಡುಪಿ: 2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮೇ 26 ರಿಂದ ಜೂನ್ 2ರ ವರೆಗೆ ಪರೀಕ್ಷೆ-2 ಅನ್ನು ನಡೆಸಲಾಗುತ್ತಿದ್ದು, ಸದ್ರಿ ಪರೀಕ್ಷೆಗೆ ನೋಂದಾವಣೆಯಾಗುವ ವಿದ್ಯಾರ್ಥಿಗಳಿಗೆ ಪ್ರಪ್ರಥಮ ಬಾರಿಗೆ ಶುಲ್ಕ ವಿನಾಯಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ನೀಡಲಾಗುತ್ತಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ 10 ಕೊನೆಯ ದಿನವಾಗಿದ್ದು, 2025 ರಲ್ಲಿ ದೀರ್ಘ ಗೈರು ಹಾಜರಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ -1 ಕ್ಕೆ ಗೈರು ಹಾಜರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ-2 […]

ಉಡುಪಿ:ಮೇ 10 ರಂದು ಸಾರಿಗೆ ಕಾರ್ಯಾಚರಣೆ ಯಲ್ಲಿ ವ್ಯತ್ಯಯ

ಉಡುಪಿ: ಮಂಗಳೂರಿನ ಬಂಗ್ರ ಕೂಳೂರು ಗೋಲ್ಡ್ಪಿಂಚ್ ಮೈದಾನ ಇಲ್ಲಿ ಮೇ 10 ರಂದು ನಡೆಯಲಿರುವ ನವೋದಯಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ಇವರ ರಜತ ಸಂಭ್ರಮ ಕಾರ್ಯಕ್ರಮಕ್ಕೆ ಮಂಗಳೂರು ವಿಭಾಗದಿಂದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ನಿಯೋಜಿಸಲಾಗುತ್ತಿರುವ ಹಿನ್ನೆಲೆ, ಸದರಿ ದಿನದಂದು ಮಂಗಳೂರು ವಿಭಾಗ ವ್ಯಾಪ್ತಿಯ ಉಡುಪಿ,ಕಾರ್ಕಳ, ಕುಂದಾಪುರ, ಸಿದ್ದಾಪುರ, ಬೈಂದೂರು ಹಾಗೂ ಭಟ್ಕಳ ವಲಯಗಳ ಸಾರಿಗೆ ಕರ‍್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಕ.ರಾ.ರ.ಸಾ.ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ:ಗ್ರಾಮ ಪಂಚಾಯತ್ ಉಪ ಚುನಾವಣೆ : ವೇಳಾಪಟ್ಟಿ ಅಧಿಸೂಚನೆ ಪ್ರಕಟ

ಉಡುಪಿ: ಗ್ರಾಮ ಪಂಚಾಯತ್ ಉಪ ಚುನಾವಣೆ -2025 ಕ್ಕೆ ಸಂಬಂಧಿಸಿದಂತೆ, 1993 ರ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಜಿಲ್ಲೆಯಲ್ಲಿನ ಉಡುಪಿ ತಾಲೂಕಿನ ಉದ್ಯಾವರ ಗ್ರಾಮ ಪಂಚಾಯತಿಯ -1 (ಮೀಸಲಾತಿ-ಸಾಮಾನ್ಯ), ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತಿಯ ಕಟ್ಟಿಂಗೇರಿ -1 (ಮೀಸಲಾತಿ-ಹಿಂದುಳಿದ ವರ್ಗ ಅ (ಮಹಿಳೆ) ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತಿಯ ಪಾದಬೆಟ್ಟು-1 (ಮೀಸಲಾತಿ-ಅನುಸೂಚಿತ ಜಾತಿ)ಸದಸ್ಯ ಸ್ಥಾನಗಳು ಸೇರಿದಂತೆ ಒಟ್ಟು 3 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ವೇಳಾಪಟ್ಟಿಯನ್ನು […]

ಉಡುಪಿ ಶ್ರೀಕೃಷ್ಣಮಠಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀಮುರಳಿ, ಅಜಯ್ ಭೇಟಿ.

ಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಮುರಳಿ ಹಾಗೂ ಅಜಯ್ ಅವರು ಇಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಪುತ್ತಿಗೆ ಶ್ರೀಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎರಡು ಚಿತ್ರನಟರೂ ಶ್ರೀಗಳಿಂದ ಕೋಟಿಗೀತಾಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.