ನೀರೆ- ಬೈಲೂರು ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳ: ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕಷ್ಟೇ ಒತ್ತು ನೀಡದೆ ಜನರ ನಾಡಿ ಮಿಡಿತ ಅರಿತು ಜನಸಾಮಾನ್ಯರ ಜೊತೆಗೆ ನಿಂತವರು. ಕಾರ್ಕಳ ಕ್ಷೇತ್ರಕ್ಕೆ ಇಂತಹ ಕೆಲಸಗಾರ ಶಾಸಕ ಬೇಕೆ ಹೊರತು ಜಾತಿವಾದಿ ಶಾಸಕ ಬೇಡ ಎಂದು ತಾ.ಪಂ ಮಾಜಿ ಅಧ್ಯಕ್ಷ ವಿಕ್ರಮ ಹೆಗ್ಡೆ ಹೇಳಿದರು. ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ- ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾರ್ಕಳ ಕ್ಷೇತ್ರವನ್ನು ಕಳೆದ 5 […]

ಮುನಿಯಾಲು ಗೋಧಾಮಕ್ಕೆ ಅಹಮದಾಬಾದ್‌ ಮಾಜಿ ಮೇಯರ್‌ ಗೌತಮ್‌ ಶಾ ಭೇಟಿ

ಹೆಬ್ರಿ: ಇಲ್ಲಿಗೆ ಸಮೀಪದ ಮುನಿಯಾಲು ಸಂಜೀವಿನಿ ಡೈರಿ ಮತ್ತು ಫಾರ್ಮ್ ಗೋಧಾಮಕ್ಕೆ ಅಹಮದಾ ಬಾದ್‌ ಮಾಜಿ ಮೇಯರ್‌ ಗೌತಮ್‌ ಶಾ ಭೇಟಿ ನೀಡಿ ಗೋಧಾಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಧಾಮವನ್ನು ಪುರಾತನ ಕಲ್ಪನೆಯಲ್ಲಿ ಆಧುನಿಕವಾಗಿ ನಿರ್ಮಿಸಿ ಕೃಷಿ, ಪ್ರವಾಸೋಧ್ಯಮ ತಾಣವಾಗಿ ನಿರ್ಮಿಸಿ ಅಂತರಾಷ್ಟ್ರೀಯ ಖ್ಯಾತಿ ನೀಡಿರುವುದಕ್ಕೆ ಖುಷಿ ಪಟ್ಟರು. ಬಳಿಕ ಗೋಧಾಮದಲ್ಲಿ ವಿಹಾರ ಮಾಡಿ ಗೋಪೂಜೆ ಸಲ್ಲಿಸಿದರು. ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ಸ್‌ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ಮತ್ತು ಸವಿತಾ […]

ಮುದ್ರಾಡಿ ಗ್ರಾಮ ಮತದಾರರ ಭೇಟಿ ಮಾಡಿದ ವಿ. ಸುನಿಲ್ ಕುಮಾರ್

ಹೆಬ್ರಿ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಎ.24 ರಂದು ಭೇಟಿ ಮಾಡಿದರು. ಬರುವ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನೀಡುವಂತೆ, ಕಾರ್ಕಳವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಆಶೀರ್ವದಿಸುವಂತೆ ಕೋರಿದರು.

ನಿಟ್ಟೂರು ಪರಿಸರದ ಗದ್ದೆಯಲ್ಲಿ ಎಕ್ಕರೆಗಟ್ಟಲೆ ಪ್ರದೇಶಕ್ಕೆ ವ್ಯಾಪಿಸಿದ ಬೆಂಕಿ..!

ಉಡುಪಿ : ಉಡುಪಿಯ ನಿಟ್ಟೂರಿನಲ್ಲಿ ಇಂದು ಮಧ್ಯಾಹ್ನದ ಎರಡು ಗಂಟೆ ಸುಮಾರಿಗೆ ಗದ್ದೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದಾಗಿ ಎಕ್ಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು ಇಡೀ ಗದ್ದೆ ಬಿದಿರು ಪೊದೆ ಗಳಿಗೆ ಬೆಂಕಿ ಹಬ್ಬಿದ್ದು ಹಲವು ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಯಾವುದೇ ಮನೆಗಳಿಗೆ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಹಾಗೂ ಮಲ್ಪೆ ಅಗ್ನಿಶಾಮಕ ದಳದ ವಾಹನ ಮತ್ತು ಸಿಬ್ಬಂದಿ ಬೆಂಕಿ ನಲ್ಲಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆಈ […]

ವರನಟ ಡಾ. ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮ

ಉಡುಪಿ: ವರನಟ ಡಾ. ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮವನ್ನು ಸೋಮವಾರ ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ವಾರ್ತಾಧಿಕಾರಿ ಮಂಜುನಾಥ್.ಬಿ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಾರ್ತಾ ಸಹಾಯಕ ಶಿವಕುಮಾರ್ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.