ಬೈಂದೂರು: ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಶ್ರೀ ಸೇನೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಭಾಗಿ..

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ್ ಪೂಜಾರಿ ಅವರು ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಭಾಗಿಯಾದರು. ಹಾಗೂ ಶ್ರೀ ದೇವರ ಆಶೀರ್ವಾದ ಪಡೆದರು.

ಪ್ರಚಾರ ತೀವ್ರಗೊಳಿಸಿದ ಭಾರತೀಯ ಜನತಾ ಪಕ್ಷ: ಮೋದಿ-ಯೋಗಿ ಸಹಿತ ಘಟಾನುಘಟಿ ನಾಯಕರಿಂದ ಸಭೆ-ರೋಡ್ ಶೋ

ಬೆಂಗಳೂರು: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಭಾರತೀಯ ಜನತಾ ಪಕ್ಷವು ತೀವ್ರಗೊಳಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಹಲವಾರು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಮಂಡ್ಯ ಮತ್ತು ವಿಜಯಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಪ್ರವೇಶ ಮಾಡಲಿದ್ದಾರೆ. ಒಕ್ಕಲಿಗರಲ್ಲಿ ಹಲವರು ತಮ್ಮದು ನಾಥ ಪಂಥಕ್ಕೆ ಸೇರಿದ ಮಠವೆಂದು ನಂಬುತ್ತಾರೆ. ಈ ಕಾರಣದಿಂದ ಒಕ್ಕಲಿಗರು ಯೋಗಿ […]

ಹೆಜಮಾಡಿ ಗ್ರಾ.ಪಂ. ಮಾಜಿ ಸದಸ್ಯ ಗೋವರ್ಧನ್ ಕೋಟ್ಯಾನ್ ಬಿಜೆಪಿ ಸೇರ್ಪಡೆ..

ಪಡುಬಿದ್ರೆ: ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಗೋವರ್ಧನ್ ಕೋಟ್ಯಾನ್ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿದ ಕಲೆ ಸಾರ್ಥಕ ಜೀವನದ ಸಾಧನ: ಮಧುಬನಿ ಕಲಾವಿದರ ಅಭಿಮತ

ಮಣಿಪಾಲ: ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಕಲೆ ಜನರನ್ನು ಒಂದು ಮಾಡುತ್ತದೆ ಮತ್ತು ಏಕತೆಯ ಸಂದೇಶವನ್ನು ಹರಡುತ್ತದೆ ಎಂದು ಬಿಹಾರದ ಮಧುಬನಿ ಕಲಾವಿದರು ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿದ್ಯಾರ್ಥಿಗಳೊಂದಿಗೆ ಮಧುಬನಿ ಕಲಾವಿದರಾದ ಸರವಣ್ ಕುಮಾರ್ ಪಾಸ್ವಾನ್, ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಉಜಾಲಾ ಕುಮಾರಿ ಮಾತನಾಡಿ, ಕಲೆಯು ಸಾರ್ಥಕ ಜೀವನದ ಸಾಧನವಾಗಿದೆ ಎಂದು ಹೇಳಿದರು. ಕಲಾವಿದರು ತಮ್ಮ ಹುಟ್ಟಿನ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುವುದು ನಿಜವಾದರೂ ಕಲೆ […]

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅಧಿಕೃತ ನಿವಾಸದ ‘ಸುಂದರೀಕರಣ’ಕ್ಕೆ 45 ಕೋಟಿ ಖರ್ಚು! ಕೊರೋನಾ ಸಂಕಷ್ಟ ಕಾಲದಲ್ಲಿ ದುಂದುವೆಚ್ಚ?

ಹೊಸದಿಲ್ಲಿ: ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದ ‘ಸುಂದರೀಕರಣ’ಕ್ಕೆ 45 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ಮಂಗಳವಾರ ಹೇಳಿಕೊಂಡಿದ್ದು, ‘ನೈತಿಕ’ ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ. ವರದಿಗಳ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರ ವಸತಿ ಗೃಹದ ನವೀಕರಣಕ್ಕೆ ರೂ 44.78 ಕೋಟಿ ಖರ್ಚು ಮಾಡಲಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಆಮ್ಲಜನಕ ಟ್ಯಾಂಕರ್‌ಗಳನ್ನು ಖರೀದಿಸಲು ಹಣವಿಲ್ಲ ಎಂದಿದ್ದ ದೆಹಲಿ ಎಎಪಿ ಸರ್ಕಾರವು ತಲಾ 5 ಲಕ್ಷ ರೂಪಾಯಿ ಮೌಲ್ಯದ […]