ಅದಿತಿ ಸ್ವಾಮಿ 18 ವರ್ಷದೊಳಗಿನವರ ಅರ್ಹತಾ ಸುತ್ತಿನಲ್ಲಿ ದಾಖಲೆ

ಮೆಡೆಲಿನ್ : ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆಯುತ್ತಿರುವ 18 ವರ್ಷದೊಳಗಿನವರ ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ಭಾರತದ ಅದಿತಿ ಸ್ವಾಮಿ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದರು.16 ಅದಿತಿ ಸ್ವಾಮಿ ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆದ (ಬಿಲ್ಲುಗಾರಿಕೆ ) ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ ಕಳೆದ ಡಿಸೆಂಬರ್‌ನಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾಕಪ್ ಲೆಗ್ 3 ರಲ್ಲಿ ಬೆಳ್ಳಿ ಗೆದ್ದ 16 ವರ್ಷದ ಅದಿತಿ, ಮಂಗಳವಾರ ನಡೆದ ಪಂದ್ಯದಲ್ಲಿ 720 ಕ್ಕೆ 711 ಅಂಕಗಳನ್ನು ಕಲೆ ಹಾಕುವ ಮೂಲಕ […]

ನೀಟ್ 2023: ಎಕ್ಸ್ಪರ್ಟ್’ನ ಬೈರೇಶ್‍ಗೆ 2ನೇ ರ‍್ಯಾಂಕ್

ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಅಖಿಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಒಟ್ಟು 720 ಅಂಕಗಳಲ್ಲಿ 710 ಅಂಕ ಪಡೆದು, ರಾಜ್ಯದ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು ಕಾಲೇಜಿನ 1365 ವಿದ್ಯಾರ್ಥಿಗಳಲ್ಲಿ 1307ರಷ್ಟು ಅಂದರೆ ಶೇ. 96ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. […]

ಸಿಇಟಿ ಫಲಿತಾಂಶ ನಾಳೆ ಬೆಳಗ್ಗೆ 9.30ಕ್ಕೆ ಪ್ರಕಟ..

ಬೆಂಗಳೂರು : ನೀಟ್ ಪರೀಕ್ಷಾ ಫಲಿತಾಂಶದ ಬೆನ್ನಲ್ಲೇ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಸಮಯ ನಿಗದಿಯಾಗಿದೆ. ನಾಳೆ ಬೆಳಗ್ಗೆ 9.30ಕ್ಕೆ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.ನಾಳೆ ಬೆಳಗ್ಗೆ 9.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್​ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಾಳೆ ಬೆಳಗ್ಗೆ 09.30ಕ್ಕೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ ಬರೆದಿರುವ ಸಿಇಟಿ ಪರೀಕ್ಷಾ […]

2028ರ ವೇಳೆಗೆ ಕಚ್ಚಾ ತೈಲ ಬೇಡಿಕೆ ಗಮನಾರ್ಹ ಕುಸಿತ

ಲಂಡನ್ : ಹೊಸ ‘ಮಧ್ಯಮ-ಅವಧಿಯ ವರದಿ’ಯಲ್ಲಿ ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಈ ಮಾಹಿತಿ ನೀಡಿದೆ ಎಂದು ವರದಿ ತಿಳಿಸಿದೆ. 2026 ರ ನಂತರ ಸಾರಿಗೆಗಾಗಿ ತೈಲ ಬಳಕೆಯು ಕ್ಷೀಣಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಹೆಚ್ಚಿದ ಬಳಕೆ, ಜೈವಿಕ ಇಂಧನಗಳ ಬೆಳವಣಿಗೆ ಮತ್ತು ಇಂಧನ ಆರ್ಥಿಕತೆಯನ್ನು ಸುಧಾರಿಸುವುದರಿಂದ ತೈಲ ಬಳಕೆ ಕಡಿಮೆಯಾಗಲಿದೆ ಜಾಗತಿಕ ಕಚ್ಚಾ ತೈಲ ಬೇಡಿಕೆಯ ಬೆಳವಣಿಗೆಯು 2028 ರ ವೇಳೆಗೆ ಗಣನೀಯವಾಗಿ ನಿಧಾನಗೊಳ್ಳಲಿದೆ ಮತ್ತು ದಶಕದ ಅಂತ್ಯದ ಮೊದಲು ಬೇಡಿಕೆಯು ಗರಿಷ್ಠ ಮಟ್ಟದಲ್ಲಿರಲಿದೆ ಎಂದು […]

‘ಗೀತಾ ಗೋವಿಂದಂ’ ನಿರ್ದೇಶಕರ ಹೊಸ ಸಿನಿಮಾ VD13ಗೆ ವಿಜಯ್​ ದೇವರಕೊಂಡಗೆ ಮೃಣಾಲ್​ ನಾಯಕಿ

ಟಾಲಿವುಡ್​ ಸ್ಟಾರ್​ ನಟ ವಿಜಯ್ ದೇವರಕೊಂಡ ‘ಗೀತಾ ಗೋವಿಂದಂ’ ಮೂಲಕ ಹಿಟ್​ ಆದರು. ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಸದ್ದು ಮಾಡಿತ್ತು.VD13 ಸಿನಿಮಾದ ಮುಹೂರ್ತ ಕಾರ್ಯಕ್ರಮ ಹೈದರಾಬಾದ್​ನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿದೆ. 100 ಕೋಟಿ ಕ್ಲಬ್ ಬಾಚಿದ್ದ ಗೀತಾ ಗೋವಿಂದಂ ಸಿನಿಮಾಗೆ ಸೌತ್ ಸಿನಿಜಗತ್ತು ಜೈಕಾರ ಹಾಕಿತ್ತು. ಈ ಸಿನಿಮಾ ಬ್ಲಾಕ್​ ಬಸ್ಟರ್​ ಆದ ನಂತರ ಚಿತ್ರತಂಡ ಮತ್ತೊಮ್ಮೆ ಕೈ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದೀಗ ಆರು ವರ್ಷಗಳ ನಂತರ […]