ಶರ್ಟ್​ಲೆಸ್ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಫಿಟ್ನೆಸ್​ ಐಕಾನ್​ ಹೃತಿಕ್​ ರೋಷನ್

ನಟ ಹೃತಿಕ್​ ರೋಷನ್​ ಹಿಂದಿ ಚಿತ್ರರಂಗದ ಫಿಟ್ನೆಸ್​ ಸೆಲೆಬ್ರಿಟಿಗಳಲ್ಲಿ ಒಬ್ಬರು. ಬಾಲಿವುಡ್​ ನಟರಲ್ಲಿ ಹೃತಿಕ್ ರೋಷನ್ ಮಾತ್ರ ನೋಟ, ಫಿಟ್‌ನೆಸ್, ನಟನೆ, ನೃತ್ಯ ಮತ್ತು ಆಯಕ್ಷನ್‌ನಲ್ಲಿ ಯಾವುದೇ ಹಾಲಿವುಡ್ ನಟರನ್ನಾದರೂ ಸೋಲಿಸಲು ಸಮರ್ಥರಾಗಿದ್ದಾರೆ.ಬಾಲಿವುಡ್​ ನಟ ಹೃತಿಕ್​ ರೋಷನ್​ ಶರ್ಟ್​ಲೆಸ್ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್​ ಮಾಡಿಕೊಂಡಿರುವ ನಟ, ‘ಹಿಂದಿನ ದಿನ’ ಎಂದು ಕ್ಯಾಪ್ಶನ್​ ನೀಡಿದ್ದಾರೆ. ಚಿತ್ರದಲ್ಲಿ, ಅವರು ಶರ್ಟ್ ರಹಿತವಾಗಿ ತಮ್ಮ ಬೆನ್ನನ್ನು ಪ್ರದರ್ಶಿಸುವುದನ್ನು ಕಾಣಬಹುದು. ಜೊತೆಗೆ ಕಪ್ಪು ಟೋಪಿ ಮತ್ತು ಕಪ್ಪು ಪ್ಯಾಂಟ್ […]

ಎಸ್​ಬಿಐ ವರದಿ: 2000 ರೂ. ನೋಟು ಹಿಂಪಡೆಯುವಿಕೆಯಿಂದ ಬ್ಯಾಂಕ್​ಗಳಲ್ಲಿ ಠೇವಣಿ ಹೆಚ್ಚಳ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನಿರ್ವಹಣೆಯ ಭಾಗವಾಗಿ ಚಲಾವಣೆಯಲ್ಲಿರುವ 2000 ರೂಪಾಯಿಗಳ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದರೂ, ಈ ಕ್ರಮವು ವಿವಿಧ ಸ್ಥೂಲ ಆರ್ಥಿಕ ನಿಯತಾಂಕಗಳನ್ನು  ಹೆಚ್ಚಿಸುವ ಸಾಧ್ಯತೆಯಿದೆ. 2000 ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ಹಿಂಪಡೆಯಲು ನಿರ್ಧರಿಸಿದ ನಂತರ ಬ್ಯಾಂಕ್​​ಗಳಲ್ಲಿನ ಠೇವಣಿ ಮೊತ್ತದಲ್ಲಿ ಹೆಚ್ಚಳವಾಗಿದೆ ಎಂದು ಎಸ್​ಬಿಐ ವರದಿ ತಿಳಿಸಿದೆ. 2000 ರೂ ಮುಖಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ RBI ಕಾಯಿದೆ, 1934 ರ ಸೆಕ್ಷನ್ 24 (1) ಅಡಿ ಪರಿಚಯಿಸಲಾಯಿತು. ಆ […]

ತಪಸ್ಸ್ – 201 ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ

ಕಾರವಾರ(ಉತ್ತರ ಕನ್ನಡ): ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಲ್ಲಿಂದ ಪ್ರಾಯೋಗಿಕ ಹಾರಾಟ ನಡೆಸಿದ ತಪಸ್ಸ್-201, ಕಾರವಾರ ನೌಕಾನೆಲೆಯಿಂದ 148 ಕಿ.ಮೀ ದೂರದಲ್ಲಿದ್ದ ಐಎನ್‌ಎಸ್ ಸುಭದ್ರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ ವಿನ್ಯಾಸಗೊಳಿಸಿದ ತಪಸ್ಸ್-201 ಏರಿಯಲ್ ವೆಹಿಕಲ್‌, 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ತಪಸ್ಸ್ – 201 ಯಶಸ್ವಿ: ಮಾನವ ರಹಿತ ಏರಿಯಲ್ ವೆಹಿಕಲ್‌ನ ಸಾಮರ್ಥ್ಯ ಪರೀಕ್ಷೆಗಾಗಿ 285 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗದ […]

ಭಾರತೀಯ ಸೇನೆಯನ್ನು ಸೇರಿಕೊಂಡ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ತಯಾರಿಸಿದ ಪ್ರಪ್ರಥಮ ಶಸ್ತ್ರಸಜ್ಜಿತ ಲಘು ವಿಶೇಷ ವಾಹನ: ಆರ್ಮಡೋ

ಹೊಸದಿಲ್ಲಿ: ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (MDS) ಭಾರತೀಯ ಸಶಸ್ತ್ರ ಪಡೆಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಭಾರತದ ಪ್ರಪ್ರಥಮ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ALSV) ‘ಆರ್ಮಡೋ’ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. MDS ಮಹೀಂದ್ರಾ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹೊಸ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ತಯಾರಿಸಲಾಗಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆರ್ಮಡೊ ಒಂದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದ್ದು, ರಕ್ಷಣಾ ಪಡೆಗಳ ಬಳಕೆಗಾಗಿ ನಿರ್ಮಿಸಲಾಗಿದೆ. […]

ದೊಡ್ಡಣ್ಣಗುಡ್ಡೆ: ಜೂನ್ 22 ರಿಂದ 25 ರವರೆಗೆ ಹಲಸು ಮೇಳ-2023

ದೊಡ್ಡಣ್ಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿ ಸಹಯೋಗದಲ್ಲಿ ಜೂನ್ 22 ರಿಂದ 25 ರವರೆಗೆ ದೊಡ್ಡಣ್ಣಗುಡ್ಡೆ ಪುಷ್ಪ ಹರಾಜು ಕೇಂದ್ರ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಹಲಸು ಮೇಳ-2023 ಅನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಾತಿ ಹಲಸಿನ ಹಣ್ಣಿನ ಮಾರಾಟ, ಹಲಸಿನ ಖಾದ್ಯಗಳು, ಹಲಸಿನ ಗಿಡಗಳ ಮಾರಾಟ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಮಳಿಗೆಗಳನ್ನು ತೆರೆಯಲು ಇಚ್ಛಿಸುವ ರೈತರು ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕ […]