ಇದು ಗೊತ್ತಾದ್ರೆ ಸ್ವೀಟ್ ಕಾರ್ನ್, ಸೋ ಸ್ವೀಟ್ ಅಂತೀರಾ!
ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ತಿನ್ನುವ ಖುಷಿಯೇ ಬೇರೆ. ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಸ್ವೀಟ್ ಕಾರ್ನ್ ಇಷ್ಟವಾಗುತ್ತದೆ. ಮಕ್ಕಳಿಗಳಂತೂ ಸ್ವೀಟ್ ಕಾರ್ನ್ ಎಂದರೆ ಫೆವರೇಟ್ ಬಿಡಿ. ಪೇಟೆಯಲ್ಲಿ ಯಾವುದ್ಯಾವುದೋ ಗಾಡಿಯ ತಿಂಡಿಗಳನ್ನು ತಿನ್ನುವುದಕ್ಕಿಂತಲೂ ಅಂತದ್ದೇ ಗಾಡಿಗಳಲ್ಲಿ ದೊರಕುವ ಸ್ವೀಟ್ ಕಾರ್ನ್ ತಿನ್ನುವುದು ಹೆಚ್ಚು ಸೂಕ್ತ. ಯಾಕೆಂದರೆ ಸ್ವೀಟ್ ಕಾರ್ನ್ ನಲ್ಲಿ ಕೆಲವೊಂದು ಆರೋಗ್ಯ ಲಾಭಗಳಿವೆ. ಆದರೆ ಮನೆಯಲ್ಲಿಯೇ ಸ್ವೀಟ್ ಕಾರ್ನ್ ಬೇಯಿಸಿ ತಿಂದರೆ ಇನ್ನೂ ಬೆಸ್ಟ್.ಸ್ವೀಟ್ ಕಾರ್ನ್ ನಿಂದ ಏನೆನೆಲ್ಲಾ ಲಾಭಗಳಿವೆ ಎಂದು ಇಲ್ಲಿ ಮಾಹಿತಿ […]
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ 10 ಸಾವಿರ ಆರ್ಥಿಕ ನೆರವು ಹಸ್ತಾಂತರ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಚಿಕಿತ್ಸೆಗಾಗಿ 10 ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವನ್ನು ಉಡುಪಿಯ ರಾಮ ಭವನ ಹೋಟೆಲಿನ ಸಂಕೀರ್ಣದಲ್ಲಿ ಈಚೆಗೆ ಹಸ್ತಾಂತರಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಶೆಣೈ ಅವರು ಕಿರಣ ಯು.ಕೆ ಅವರಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ. ಶಂಕರ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಪ್ರತಿಷ್ಠಾನದ ಸದಸ್ಯರಾದ ಸುಮಿತ್ರಾ ಕೆರೆಮಠ, ಪದ್ಮಾಸಿನಿ ಉದ್ಯಾವರ, ಗಜಾನನ ಹೆಗಡೆ, ಭಾವನಾ ಕೆರೆಮಠ […]
ಉಡುಪಿ: ಇಂದು 34 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್: ಜಿಲ್ಲೆಯಲ್ಲಿ ಒಟ್ಟು 1765 ಮಂದಿ ಕೊರೊನಾದಿಂದ ಗುಣಮುಖ
ಉಡುಪಿ: ಜಿಲ್ಲೆಯಲ್ಲಿ ಇಂದು 34 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 1765 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಳವಾಗಿದ್ದು, ಇಂದು ಒಂದೇ ದಿನ 281 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಜಿಲ್ಲೆಯಲ್ಲಿ 910 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಂದು ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ 11 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ ಎಂದು […]
ಉಡುಪಿಯಲ್ಲಿ ಇಂದು ಒಂದೇ ದಿನ 281 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕು ಹರಡುತ್ತಿದ್ದು, ಇಂದು ಒಂದೇ ದಿನ 281 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2686ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿ: ಬಿಜೆಪಿ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳ ಸಭೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ’ಸೇವಾ ಹೀ ಸಂಘಟನ್’ ಪರಿಕಲ್ಪನೆಯಲ್ಲಿ ಕೋವಿಡ್-೧೯ ಮುಂಜಾಗ್ರತಾಕ್ರಮದ ಲಾಕ್ಡೌನ್ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ದೇಶಾದ್ಯಂತ ನಡೆದ ವಿವಿಧ ಸೇವಾ ಚಟುವಟಿಕೆಗಳನ್ನು ಡಿಜಿಟಲ್ ದಾಖಲೀಕರಣಗೊಳಿಸಿ ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಇ-ಬುಕ್ರಚಿಸುವ ಪ್ರಕ್ರಿಯೆರಾಜಕೀಯಕ್ಷೇತ್ರದಲ್ಲೇ ಹೊಸ ಮೈಲುಗಲ್ಲು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳ ಸಭೆಯಅಧ್ಯಕ್ಷತೆಯನ್ನು ವಹಿಸಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಬಿಜೆಪಿಯ ಸೂಚನೆಯಂತೆ ಪಕ್ಷದ […]