ಉಡುಪಿ: ಕರಾವಳಿ ತೀರದ ಸುಂದರ ಸೊಗಡಿನ ಕಥಾ ಹಂದರದ ಕನ್ನಡ ಚಲನಚಿತ್ರ “ಆರ”ದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ. ಆರ , ಮುಗ್ಧ ಜೀವನದಲ್ಲಿ ಸುಂದರ ದೈವಿಕ ಹಸ್ತಕ್ಷೇಪದ ದೇವರ ನಾಟಕದ ಕಥಾನಕವನ್ನು ಹೊಂದಿದೆ.
ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ ಮತ್ತು ಸುಜಾತಾ ಚಡಗ, ಚಂದ್ರಶೇಖರ್ ಮತ್ತು ರೋಹಿತ್ ನಿರ್ಮಿಸಿದ್ದಾರೆ. ರೋಹಿತ್, ದೀಪಿಕಾ ಆರಾಧ್ಯ, ಆನಂದ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನು ಗಿರೀಶ್ ಹೋತೂರ್ ಸಂಯೋಜಿಸಿದ್ದಾರೆ. ಅಜಿತ್ ಕೇಶವ, ರೋಹಿತ್, ರಾಕೇಶ್, ಮನು ದೇವರಹಳ್ಳಿ ಸಾಹಿತ್ಯ ಬರೆದಿದ್ದಾರೆ. ಅನಿರುದ್ಧ ಶಾಸ್ತ್ರಿ , ಸಂಗೀತಾ ಕಟ್ಟಿ , ಪಂಚಮಜೀವನ್ , ಅರುಂದತಿ ಹೆಗ್ಡೆ , ರಾಕೇಶ್ , ರೋಹಿತ್ ಮುಂತಾದವರು ಹಾಡಿಗೆ ಧ್ವನಿ ನೀಡಿದ್ದಾರೆ.
‘ಆರ’ ಎಂಬ ಯುವಕನ ಆಧ್ಯಾತ್ಮಿಕ ಪಯಣದ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಕಥೆ ಚಿತ್ರದಲ್ಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದೆ. ಚಿತ್ರದಲ್ಲಿ ಉಡುಪಿಯ ಕನ್ನಡವನ್ನು ಬಳಸಲಾಗಿದೆ.
ಎ.ಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಮೂಡಿಬಂದಿರುವ ಚಿತ್ರವು ಜು.28 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.