ನವದೆಹಲಿ: ಆಗಸ್ಟ್ನಲ್ಲಿ ದೇಶದ ಒಟ್ಟು ಜಿಎಸ್ಟಿ ಆದಾಯ 1,59,069 ಕೋಟಿ ರೂ.ಗಳಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದು ಜುಲೈನಲ್ಲಿ ಸಂಗ್ರಹವಾದ 1,65,105 ಕೋಟಿ ರೂ.ಗಿಂತ ಶೇ 3.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಆಗಸ್ಟ್ 2022ರಲ್ಲಿ ಬಂದಿದ್ದ ಜಿಎಸ್ಟಿ ಆದಾಯ 1,43,612ಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ಜಿಎಸ್ಟಿ ಆದಾಯ ಶೇಕಡಾ 11 ರಷ್ಟು ಹೆಚ್ಚಾಗಿರುವುದು ಗಮನಾರ್ಹ.ಈ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದ ಜಿಎಸ್ಟಿ ಆದಾಯ 1,59,069 ಕೋಟಿ ರೂಪಾಯಿಗಳಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.
.ಸರ್ಕಾರವು ಸಿಜಿಎಸ್ಟಿಗೆ 37,581 ಕೋಟಿ ರೂ., ಎಸ್ಜಿಎಸ್ಟಿಗೆ 31,408 ಕೋಟಿ ರೂ.ಗಳನ್ನು ಐಜಿಎಸ್ಟಿಯಿಂದ ಸೆಟ್ಲ್ ಮಾಡಿದೆ. ನಿಯಮಿತ ಸೆಟ್ಲ್ಮೆಂಟ್ ನಂತರ ನಂತರ 2023 ರ ಆಗಸ್ಟ್ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿ 65,909 ಕೋಟಿ ರೂ. ಮತ್ತು ಎಸ್ಜಿಎಸ್ಟಿ 67,202 ಕೋಟಿ ರೂ. ಗಳಾಗಿದೆ. ಆಗಸ್ಟ್ 2023 ರ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಸ್ಟಿ ಆದಾಯಕ್ಕಿಂತ ಶೇಕಡಾ 11ರಷ್ಟು ಹೆಚ್ಚಾಗಿದೆ.ಆಗಸ್ಟ್ 2023ರಲ್ಲಿ ಬಂದ 1,59,069 ಕೋಟಿ ರೂ. ಜಿಎಸ್ಟಿ ಆದಾಯದ ಪೈಕಿ ಸಿಜಿಎಸ್ಟಿ 28,328 ಕೋಟಿ ರೂ., ಎಸ್ಜಿಎಸ್ಟಿ 35,794 ಕೋಟಿ ರೂ., ಐಜಿಎಸ್ಟಿ 83,251 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 43,550 ಕೋಟಿ ರೂ.ಗಳು ಸೇರಿದಂತೆ) ಮತ್ತು ಸೆಸ್ 11,695 ಕೋಟಿ ರೂ. ಆಗಿದೆ
ಜಿಎಸ್ಟಿ ಎಂಬುದು ಸರಕು ಮತ್ತು ಸೇವಾ ತೆರಿಗೆಯ ಸಂಕ್ಷಿಪ್ತ ರೂಪವಾಗಿದೆ. ಇದು ಪರೋಕ್ಷ ತೆರಿಗೆಯಾಗಿದ್ದು, ಅಬಕಾರಿ ಸುಂಕ, ವ್ಯಾಟ್, ಸೇವಾ ತೆರಿಗೆ ಮುಂತಾದ ಅನೇಕ ಪರೋಕ್ಷ ತೆರಿಗೆಗಳನ್ನು ಇದು ತೆಗೆದು ಹಾಕಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು 2017 ರ ಮಾರ್ಚ್ 29 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಮತ್ತು ಇದು 2017ರ ಜುಲೈ 1 ರಿಂದ ಜಾರಿಗೆ ಬಂದಿತು.
ಸರಕು ಮತ್ತು ಸೇವಾ ತೆರಿಗೆಯನ್ನು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುತ್ತದೆ. ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾನೂನು ತಳಹದಿಯ, ಬಹು-ಹಂತದ, ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದ್ದು, ಪ್ರತಿ ಮೌಲ್ಯವರ್ಧನೆಯ ಮೇಲೆ ವಿಧಿಸಲಾಗುತ್ತದೆ. ಜಿಎಸ್ಟಿ ಇದು ಇಡೀ ದೇಶಕ್ಕೆ ಒಂದೇ ದೇಶೀಯ ಪರೋಕ್ಷ ತೆರಿಗೆ ಕಾನೂನು ಆಗಿದೆ.ಈ ತಿಂಗಳಲ್ಲಿ ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡಾ 3ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 14 ರಷ್ಟು ಹೆಚ್ಚಾಗಿದೆ. ಇದಕ್ಕೂ ಮುನ್ನ ಶುಕ್ರವಾರ, ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರು ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾತನಾಡಿ, ಆಗಸ್ಟ್ 2023ರ ಜಿಎಸ್ಟಿ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದರು.