ಉಡುಪಿ: ಆ. 5ರ ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು, ಅಂದು ಉಡುಪಿಯ ಪೇಜಾವರ ಮಠದಲ್ಲೂ ಸಂಭ್ರಮಾಚರಣೆ ಹಾಗೂ ವಿಶ್ವೇಶತೀರ್ಥ ಶ್ರೀಪಾದರಿಗೆ ಭಕ್ತಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಾಸುದೇವ ಭಟ್ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಕೊಡುಗೆ ಅಪಾರವಾಗಿದೆ. ಅವರು ನೀಡಿರುವ ಮಾರ್ಗದರ್ಶನ, ಸ್ಫೂರ್ತಿ, ನೇತೃತ್ವ ಎಲ್ಲವನ್ನೂ ಸ್ಮರಿಸಿಕೊಂಡು ಅವರ ಭಾವಚಿತ್ರ ಹಾಗೂ ಪೀಠಕ್ಕೆ ವಿಶೇಷ ಅಲಂಕಾರ ಮಾಡಿ ಬೆಳಿಗ್ಗೆ 11.45ರ ವೇಳೆಗೆ ಮಂಗಳಾರತಿ ಬೆಳಗಿಸಲಾಗುವುದು. ಬಳಿಕ ಮಠದ ಮುಂಭಾಗದ ರಥಬೀದಿಯಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












