ಪ್ರೈಮ್ ಉಡುಪಿ: ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಆ.29 ರಿಂದ ಆರಂಭ

ಉಡುಪಿ: ಪ್ರೈಮ್ ಉಡುಪಿ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಆ.29ರಿಂದ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐ.ಬಿ.ಪಿ.ಎಸ್) ಆಯೋಜಿಸುವ ಬ್ಯಾಂಕ್ ಆಪೀಸರ್ ಮತ್ತು ಕ್ಲರಿಕಲ್ ಹುದ್ದೆಗಳ ನೇಮಕಕ್ಕೆ ಐಬಿಪಿಎಸ್ ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು ಇದಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚೇತನ್ ಪ್ರಭು ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ  ಬಗ್ಗೆ ಮಾಹಿತಿ ನೀಡಿದರು.

ತರಬೇತಿಯಲ್ಲಿ ಏನಿದೆ?

ವಾರದ ಎಲ್ಲಾ ದಿನಗಳಲ್ಲಿ ನಡೆಯಲಿರುವ ಈ ತರಬೇತಿಯು ಪ್ರತೀ ಸೋಮವಾರದಿಂದ ಶನಿವಾರ ಸಾ. 5.00-6.30 ರವರೆಗೆ ಮತ್ತು ಪ್ರತೀ ಭಾನುವಾರ ಸಾ.3.30-6.30 ವರೆಗೆ 200 ಗಂಟೆಗಳ ಈ ತರಬೇತಿ ಐಬಿಪಿಎಸ್ ಬ್ಯಾಂಕಿಂಗ್ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್, ಇಂಗ್ಲೀಷ್ ಮತ್ತು ಮ್ಯಾಥ್ಸ್, ಹಾಗೂ ಮೈನ್ಸ್ ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಜನರಲ್ ನಾಲೇಜ್, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ‌ ನಡೆಯಲಿದೆ.  ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಹಾಗೂ 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್ ಪ್ರೈಮ್ ಕಂಪ್ಯೂಟರ್ ಲ್ಯಾಬ್ ನಲ್ಲಿ ಉಚಿತವಾಗಿ ದೊರೆಯಲಿದೆ.

ಪದವೀದರರು, ಸ್ನಾತಕೋತ್ತರ ಪದವೀದರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಐಬಿಪಿಎಸ್ ಪಿ.ಓ. ಹುದ್ದೆಗೆ 20 ರಿಂದ 30 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 28-08-2019 ರ ಒಳಗೆ ತ  ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ 0820-4293422 ಇಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.