ಉಡುಪಿ: ಗೆಳೆಯರ ಬಳಗ ಪೆರ್ಡೂರು ಇವರ ಆಶ್ರಯದಲ್ಲಿ ಆರನೇ ವರ್ಷದ ಆಟಿಡ್ ಒಂಜಿ ಕೆಸರ್ದ ಗೊಬ್ಬು ಸ್ಪರ್ಧೆ ಕಾರ್ಯಕ್ರಮವು ಅ.11ರಂದು ರವಿವಾರ ಪೆರ್ಡೂರು ಆರಾಟಕಟ್ಟೆಯ ಪಕ್ಕದ ಗದ್ದೆಯಲ್ಲಿ ನಡೆಯಲಿದೆ.
ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಸ್ಯನಟರಾದ ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ಸ.ಹಿ.ಪ್ರಾ. ಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರು ಭಾಗವಹಿಸಲಿದ್ದಾರೆ.