ಉಡುಪಿ: ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ನಡೆಯುವ ವಾಯ್ಸ್ ಆಫ್ ಚಾಣಕ್ಯ 2023 ಉಭಯ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 6 ರ ಆಯ್ಕೆ ಪ್ರಕ್ರಿಯೆಯು ಉಡುಪಿ ಮೈಟೆಕ್ ತಾಂತ್ರಿಕ ವಿದ್ಯಾಲಯದ ಸಹಕಾರದೊಂದಿಗೆ ನ.26ರಂದು ಬೆಳಿಗ್ಗೆ10 ರಿಂದ 1 ರ ತನಕ ಉಡುಪಿ ಕಿನ್ನಿಮುಲ್ಕಿ ಜಂಕ್ಷನ್ ಸ್ವಾಗತ ಗೋಪುರ ಬಳಿ ಸಿಲ್ವರ್ ಮೈನ್ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿರುವ ಮೈ -ಟೆಕ್ ತಾಂತ್ರಿಕ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಉಡುಪಿ, ದ.ಕ ಹಾಗೂ ಶಿವಮೊಗ್ಗ ಜಿಲ್ಲೆಯವರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು 9900408545 ನಂಬರ್ ಗೆ ವಾಟ್ಸಪ್ ಮೂಲಕ ಹೆಸರನ್ನು ನೊಂದಾಯಿಸಬಹುದಾಗಿದೆ. ವಾಯ್ಸ್ ಆಫ್ ಚಾಣಕ್ಯ ಸೀಸನ್ 1 ರಿಂದ 5 ರವರೆಗಿನ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಹಾಗೂ ಸ್ಟಾರ್ ಗಾಯಕರು ಆಡಿಷನ್ ನಲ್ಲಿ ಭಾಗವಹಿಸಲು ಅವಕಾಶವಿಲ್ಲ.
ಸ್ಪರ್ಧೆಯು ಸೆಮಿಫೈನಲ್ ಹಾಗೂ ಫೈನಲ್ ಹಂತದಲ್ಲಿ ನಡೆಯಲಿದ್ದು ವಿಜೇತರಿಗೆ ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ ಬಹುಮಾನ 6 ಸಾವಿರ, ತೃತೀಯ ಬಹುಮಾನ 3 ಸಾವಿರ ಸಹಿತ ಆಕಷ೯ಕ ಟ್ರೋಫಿ ಹಾಗೂ ಪ್ರಮಾಣಪತ್ರ ದೊರೆಯಲಿದೆ.
ಅಲ್ಲದೆ 3 ಜನರಿಗೆ ಸಮಾಧಾನಕರ ಬಹುಮಾನವಾಗಿ ತಲಾ 1 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಹಾಗೂ ಫೈನಲ್ ನಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ಮತ್ತು ನಾದಂ ಮೇಲೋಡಿಸ್ ಬ್ರಹ್ಮಾವರ ಇವರಿಂದ ಗಿಫ್ಟ್ ಬಾಕ್ಸ್ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಸಂಸ್ಥೆಯನ್ನು ಸಂಪಕಿ೯ಸುವಂತೆ ಪ್ರಕಟಣೆ ತಿಳಿಸಿದೆ.