ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 26 ರಿಂದ ಶುರುವಾಗಿದ್ದು ಬುಧವಾರ ಅತ್ತೂರಿನಾಂದ್ಯತ ಜನಜಾತ್ರೆ ನೆರೆದಿತ್ತು.
ಜ. 26ರಂದು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಕೊಂಕಣಿಯಲ್ಲಿ),
ಜ. 27ರಂದು ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿ ಸ್ವಾಮಿ ಜ. 28ರಂದು ಪುತ್ತೂರು ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್ , ಶಿವಮೊಗ್ಗ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಎಸ್.ಜೆ.,ಜ. 29ರಂದು ಉಡುಪಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಲೋಬೋ ಬಲಿಪೂಜೆ ನೆರವೇರಿಸಿದರು.
ರಂಗೇರಿದ ಜನಜಾತ್ರೆ:
ಮಂಗಳವಾರ ಮತ್ತು ಬುಧವಾರ ಅತ್ತೂರು ಕ್ಷೇತ್ರದತ್ತ ಬರುವ ಜನಜಾತ್ರೆ ಜಾಸ್ತಿಯೇ ಇತ್ತು. ಸಾವಿರಾರು ಜನರು ಚರ್ಚ್ ನಲ್ಲಿ ಮೊಂಬತ್ತಿ ಹಚ್ಚಿ ಭಕ್ತಿ ಭಾವದಲ್ಲಿ ಮಿಂದೆದ್ದರು. ವಿವಿಧ ಊರುಗಳಿಂದ ಬಂದ ಜನರು ಜಾತ್ರೆಯ ಬಣ್ಣ ಬಣ್ಣದ ವೈಭವಗಳಲ್ಲಿ ಕಳೆದುಹೋಗಿ ಖುಷಿಪಟ್ಟರು. ಗುರುವಾರ ಜಾತ್ರೆಯ ಕೊನೆಯ ದಿನವಾಗಿದ್ದು ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಜನಜಾತ್ರೆ ಸೇರುವ ನಿರೀಕ್ಷೆ ಇದೆ.