ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಮತ್ತು ಬೈಲೂರು ಮೇಲ್ಮನೆ ಗುತ್ತು ಶಶಿಕಲಾ ಶೆಟ್ಟಿ ಇವರ ಸಹಕಾರದೊಂದಿಗೆ ಬೈಲೂರು ಶ್ರೀ ರಾಮ ಮಂದಿರದಲ್ಲಿ ಜನವರಿ 31ರಂದು ಸಂಜೆ ರಾಜಯೋಗ ತರಬೇತಿ ಶಿಬಿರದಲ್ಲಿ ರಾಜಯೋಗದ ಬಗ್ಗೆ ಆಧ್ಯಾತ್ಮಿಕ ಪ್ರವಚನವನ್ನು ಮಾಡಿದ ಬ್ರಹ್ಮಾಕುಮಾರಿ ಸುಕೇತಾ ಶೆಟ್ಟಿ, ಈಶ್ಬರೀಯ ಜ್ಞಾನದಿಂದ ಏಕಾಗ್ರತೆ ಪ್ರಾಪ್ತಿಯಾಗುವುದರ ಜೊತೆಗೆ ಮನಸ್ಸಿನಲ್ಲಿ ಉದ್ಭವವಾಗುವ ಗೊಂದಲಗಳಿಂದ ಮುಕ್ತರಾಗಿ ಮನಃಶಾಂತಿ ಪಡೆಯಬಹುದು. ಈ ನಿಟ್ಟಿನಲ್ಲಿ ರಾಜಯೋಗದ ಅಭ್ಯಾಸ
ಅವಶ್ಯವೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ರುಣಾಕರ ಹೆಗ್ಡೆ ಬೈಲೂರು ಮಾತನಾಡಿ, ಸತ್ಸಂಗದಿಂದ ಜನರಲ್ಲಿ ಉನ್ನತ ವಿಚಾರಗಳು ನಡೆಯುತ್ತದೆ ಎಂದರು.
ನೀರೆ ಬೈಲೂರು ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಹಾಗೂ ನೀರೆ ಸರಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶೇಖರ್ ಶೆಟ್ಟಿ ಮಾತನಾಡಿ, ಈಶ್ವರೀಯ ಜ್ಞಾನದಿಂದ ದುಶ್ಚಟಗಳು ದೂರವಾಗಿ ಸಮಾಜದಲ್ಲಿ ಸಜ್ಜನ ವ್ಯಕ್ತಿಗಳಾಗಲು ಈಶ್ವರೀಯ ಜ್ಞಾನ ಅವಶ್ಯವೆಂದು ತಿಳಿಸಿ, ಸರಕಾರದಿಂದ ತನಗೆ ಯಲ್ಲಾಪುರದಲ್ಲಿ ಈ ತರಬೇತಿ ಲಭಿಸಿತು ಎಂದರು.
ಬೈಲೂರು ರಾಮ ಮಂದಿರದ ಅಧ್ಯಕ್ಷ ಹಾಗೂ ಉದ್ಯಮಿ ಕಮಲಾಕ್ಷ ನಾಯಕ್ ಶುಭಹಾರೈಸಿದರು.
ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಉಪಸ್ಥಿತರಿದ್ದರು.
ಬಿ.ಕೆ. ಸಂತೋಷ್ ಶೆಟ್ಟಿ ಸ್ವಾಗತಿಸಿ, ಬಿ.ಕೆ. ವರದರಾಯ ಪ್ರಭು ನಿರೂಪಿಸಿದರು. ಬಿ.ಕೆ. ಅನ್ನಪೂರ್ಣ ಪರಿಚಯಿಸಿದರು. ಬಿ.ಕೆ. ಮೀನಾಕ್ಷಿ ವಂದಿಸಿದರು.