ಮಂಗಳೂರು: ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ದುದನ್ನು ಕೇಳಲು ಹೋದ ಮೆಸ್ಕಾಂ ಸಿಬಂದಿಗೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಾಜಿ ಸಚಿವ ಯು.ಟಿ ಖಾದರ್ ಆಪ್ತ ಕಾಂಗ್ರೆಸ್ ಮುಖಂಡ ಅಮಿರ್ ಹಸನ್ ತುಂಬೆ ಎಂಬಾತ ಹಲ್ಲೆ ನಡೆಸಿದವನು.
ದೇರಳಕಟ್ಟೆ ಬಳಿ ಅಮಿರ್ ತುಂಬೆ ಮನೆಯಿದ್ದು ಬಿಲ್ ಪಾವತಿ ಮಾಡದೇ ಇದ್ದ ವಿಚಾರದಲ್ಲಿ ಲೈನ್ ಮ್ಯಾನ್ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮಿರ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿಗಳಾದ ರಂಗನಾಥ್, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಎಂಬವರಿಗೆ ಹಲ್ಲೆ ಮಾಡಿದ್ದಾನೆ.
ಮನೆಗೆ ಬಂದಿದ್ದ ಮೂರೂ ಸಿಬಂದಿಗೂ ಹಲ್ಲೆ ಮಾಡಿದ್ದಲ್ಲದೆ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್ಐಆರ್ ದಾಖಲಾಗಿದೆ.
ಅಮಿರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾಗ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಅಮೀರ್, ಅದೇ ಗುಂಗಿನಲ್ಲಿದ್ದು ಮುಸ್ಲಿಂ ಅನ್ನುವ ಕಾರಣಕ್ಕೆ ಮೆಸ್ಕಾಂ ಲೈನ್ ಮ್ಯಾನ್ ತನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.