ಆತ್ರಾಡಿ ವಿವೇಕಾನಂದ SPYSS ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ SPYSS ವಿವೇಕಾನಂದ ನಗರ ಆತ್ರಾಡಿ ಶಾಖೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ತಿಲಕ ಇರಿಸಿಅದರ ಪಕ್ಕದಲ್ಲಿ ತ್ರಿವರ್ಣ ಧ್ವಜ ವನ್ನು ಇರಿಸಿ ಮಂಗಳಾರತಿ ಮಾಡಿ ಸರ್ವ ಯೋಗ ಬಂದುಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು.

ತದನಂತರ ತ್ರಿವರ್ಣ ಧ್ವಜಗಳನ್ನು ಕೈಯಲ್ಲಿ ಹಿಡಿದು ಕೊಂಡು ಯೋಗ ನೃತ್ಯವನ್ನು ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಜಯಕಾರ ಘೋಷಣೆ ಗಳನ್ನು ಕೂಗಿದರು. ವಂದೇ ಮಾತರಂ ಗೀತೆಯ ನಂತರ ಜನಗಣ ಮನ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.