ಬಹುಚರ್ಚಿತ ಜೋಡಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಮತ್ತು ನಟ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಕಡೆಗೂ ಹಸೆಮಣೆ ಏರಲು ತಯಾರಾಗಿದ್ದಾರೆ.
ಜನವರಿ 21 ರಂದು ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಅವರ ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿದ್ದು, ಜನವರಿ 23 ರಂದು ಈ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಅಥಿಯಾ ತಂದೆ ಚಿತ್ರನಟ ಸುನೀಲ್ ಶೆಟ್ಟಿ ಅವರು 17 ವರ್ಷಗಳ ಹಿಂದೆ ಮಹಾರಾಷ್ಟ್ರದ ಖಂಡಾಲಾದಲ್ಲಿ ನಿರ್ಮಿಸಿರುವ ಬೆಲೆಬಾಳುವ ಬಂಗಲೆಯಲ್ಲಿ ವಿವಾಹ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಥಿಯಾ ಮತ್ತು ಕೆಎಲ್ ರಾಹುಲ್ ಅದ್ದೂರಿ ಮದುವೆಯನ್ನು ಬಯಸುತ್ತಿಲ್ಲವಾದ್ದರಿಂದ ಕುಟುಂಬಿಕರು ಮತ್ತು ಕೆಲವೇ ಮಂದಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭದಲ್ಲಿ ಜೋಡಿ ಹಸೆಮಣೆ ಏರಬಹುದು ಎನ್ನಲಾಗಿದೆ. ಇತ್ತ ಕೆ.ಎಲ್ ರಾಹುಲ್ ಮನೆಯಲ್ಲಿಯೂ ಮದುವೆಯ ಸಡಗರಗಳು ಪ್ರಾರಂಭವಾಗಿದ್ದು ಹಬ್ಬದ ವಾತಾವರಣ ಮನೆಮಾಡಿದೆ.












