ಕಾರ್ಕಳ: ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮಾಜಿ ಪ್ರದಾನಿ ಅಟಿಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಡಿ. 25ರಂದು ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ವಹಿಸಿ ಅಟಲ್ ಅವರು ತಮಗೆ ಸ್ಪೂರ್ತಿಯಾಗಿರುವ ಕುರಿತು ಮಾತನಾಡಿದರು.
ಪೂರ್ಣಿಮಾ ಸಿಲ್ಕ್ ನ ರವಿ ಪ್ರಕಾಶ್ ಪ್ರಭು ದಂಪತಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಉದ್ಯಮಿ ಟಿ. ರಾಮಚಂದ್ರ ನಾಯಕ್ ಅವರು ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿಯವರು ಕಾರ್ಕಳಕ್ಕೆ ಆಗಮಿಸಿ ಪಾಂಡುರಂಗ ಪ್ರಭುರವರ ಕೇಶವ ಕೃಪದಲ್ಲಿದ್ದ ತಮ್ಮ ನೆನಪನ್ನು ಮೆಲುಕು ಹಾಕಿದರು.
ಪೂರ್ಣಿಮಾ ಸಿಲ್ಕ್ಸ್ ನ ರವಿ ಪ್ರಕಾಶ್ ಪ್ರಭು ಅವರು ವಾಜಪೇಯಿಯವರು ತಮ್ಮ ಮನೆಯ ಆತಿಥ್ಯವನ್ನು ಸ್ವೀಕರಿಸಿ ಅನ್ನದಾತ ಸುಖೀಭವ ಎನ್ನುವ ಮಾತನ್ನು ನುಡಿದು ಅದರಂತೆ ಪೂರ್ಣಿಮಾ ಸ್ಥಾಪಕ ಪಾಂಡುರಂಗ ಪ್ರಭುರವರು ನಡೆದರು. ಅವರ ಕಾರ್ಯವನ್ನು ಮುನ್ನಡೆಸುವ ಪ್ರಯತ್ನ ಮಾಡುತಿದ್ದೆನೆಂದು ತಿಳಿಸಿದರು.
ಕಾರ್ಕಳ ನಗರ ಬಿಜೆಪಿ ಅಧ್ಯಕ್ಷ ಉದ್ಯಮಿ ಅರ್. ಅನಂತಕೃಷ್ಣ ಶೆಣೈ ಹಾಗೂ ಶ್ರೀ ಭುವನೇಂದ್ರ ವಿಧ್ಯಾಶಾಲಾ ಸಂಚಾಲಕ ಉದ್ಯಮಿ ನಿತ್ಯಾನಂದ ಪೈ ಶುಭಹಾರೈಸಿದರು. ಜೆಸಿಸ್ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.