ಕರಾಚಿ: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬುಧವಾರ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಖೋಸ್ತ್ ನಗರದಿಂದ ಸುಮಾರು 44 ಕಿಮೀ ದೂರದಲ್ಲಿದೆ ಮತ್ತು ಭೂಮಿಯೊಳಗೆ 51 ಕಿಮೀ ಆಳದಲ್ಲಿದೆ.
ಭೂಕಂಪನವನ್ನು ಪಾಕಿಸ್ತಾನ ಮತ್ತು ಭಾರತದ ಜನರು ಅನುಭವಿಸಿದ್ದಾರೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇ ಎಂ ಎಸ್ ಸಿ) ತಿಳಿಸಿದೆ.
ಇಸ್ಲಾಮಾಬಾದ್ ಮತ್ತು ದೇಶದ ಇತರ ಭಾಗಗಳಲ್ಲಿ ಲಘು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ಲಾಹೋರ್, ಮುಲ್ತಾನ್, ಕ್ವೆಟ್ಟಾ ಮತ್ತು ಪಾಕಿಸ್ತಾನದ ಹಲವಾರು ಇತರ ಪ್ರದೇಶಗಳಲ್ಲಿ ಕಂಪನಗಳು ಸಂಭವಿಸಿವೆ.
ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 250 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
JUST IN 🚨 Afghanistan state-run news agency reports more than 150 people killed in #earthquake in country's eastern province.
— Insider Paper (@TheInsiderPaper) June 22, 2022