ಉಡುಪಿ: ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಮಾನ್ಯತೆಯ ಮೇರೆಗೆ ಫೋಟೋ ಮ್ಯಾಜಿಕ್ ಒಮ್ನಿಕ್ ಆರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ (ಸರ್ಕಿಟ್ )ಛಾಯಾಚಿತ್ರ ಸ್ಪರ್ಧೆಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರಕ್ಕೆ ಸ್ವರ್ಣ ಪದಕ ಲಭಿಸಿದೆ. ಫೋಟೋ ಟ್ರಾವೆಲ್ ವಿಭಾಗದಲ್ಲಿ’ಚೇಸಿಂಗ್’ ಶೀರ್ಷಿಕೆಯಲ್ಲಿ ನೀಡಲಾದ ಕಂಬಳ ಚಿತ್ರಕ್ಕೆ ಬಹುಮಾನ ಲಭಿಸಿದೆ. ಇದೇ ಸ್ಪರ್ಧೆಯಲ್ಲಿ ಆಸ್ಟ್ರೋ ಅವರ 6 ಚಿತ್ರಗಳು ಸ್ವೀಕೃತಿಯನ್ನು ಪಡೆದಿವೆ.