ಜೀವನದ ನಿಯಮಗಳೇನು..? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೆ – ಜ್ಯೋತಿಷ್ಯಶಾಸ್ತ್ರ

ಮನುಷ್ಯನಾಗಿ ಹುಟ್ಟಿದ ಮೇಲೆ ನಡೆ ನುಡಿಯಿಂದ ಉತ್ತಮವಾಗಿರಬೇಕು. ಜತೆಗೆ ನಮ್ಮ ಚಾರಿತ್ರ್ಯವನ್ನು ಸಹ ಉತ್ತಮವಾಗಿಸಿಕೊಂಡಿರಬೇಕು. ಹೀಗಾದಾಗ ಮಾತ್ರ ಜೀವನದಲ್ಲಿ ಪರಿಪೂರ್ಣತೆ ಹೊಂದಲು ಸಾದ್ಯ. ಜತೆಗೆ ಯಶಸ್ಸು ಕೂಡ ಒಲಿಯಲು ಸಾಧ್ಯ. ಆದ್ರೆ ಬಹುತೇಕರು ಜೀವನದಲ್ಲಿ ನಾವು ಆಳವಡಿಸಿಕೊಳ್ಳಬೇಕಾದ ರೀತಿ ನೀತಿಗಳು ಹೇಗಿರಬೇಕು ಅನ್ನೋ ಗೊಂದಲದಲ್ಲಿ ಇರ್ತಾರೆ. ಹಾಗಾದ್ರೆ ಬನ್ನಿ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ನಿಯಮಗಳೇನು ಅನ್ನೋದನ್ನು ಇಲ್ಲಿ ನೋಡೋಣ.
ನಿರ್ಲಕ್ಷ್ಯ : ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ನಿರ್ಲಕ್ಷ್ಯದ ಕುರಿತು ಹೇಳಿದ್ದಾನೆ. ಅದೇನು ಅಂದ್ರೆ, ಯಾವತ್ತು ನಾವು ಮತ್ತೊಬ್ಬರನ್ನು ನಿರ್ಲಕ್ಷ ಮಾಡಬಾರದು ಅಂತ ಹೇಳಿದ್ದು, ಮನುಷ್ಯನು ತಾನು ಎತ್ತರಕ್ಕೆ ಬೆಳೆದಂತೆ ತಾನು ಬೆಳೆಯಲು ಕಾರಣರಾದವರನ್ನು ಅಥವಾ ತನಗಿಂತ ಕೆಳಗಿರೋರನ್ನು ಕಂಡು ಗೇಲಿ ಮಾಡುತ್ತಾನೆ. ಜತೆಗೆ ಅವರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಅವರು ಅಶಕ್ತರು ಅಂತ ತೀರ್ಮಾನಕ್ಕೆ ಬಂದು ಅವರನ್ನು ನಿರ್ಲಕ್ಷಿಸುತ್ತಾನೆ. ಈ ಗುಣದ ಬಗ್ಗೆ ಶ್ರೀಕೃಷ್ಣ ತುಂಬಾ ಸೊಗಸಾಗಿ ವಿವರಿಸಿದ್ದು, ನಾವು ಯಾರನ್ನು ಅವಹೇಳನ ಅಥವಾ ನಿರ್ಲಕ್ಷ ಮಾಡಿರುತ್ತೇವೋ ಅವರೇ ಮುಂದೆ ನಮಗಿಂತ ಶಕ್ತಿಶಾಲಿಗಳಾಗ ಬಹುದು. ಅಥವಾ ನಿನ್ನ ಅಹಂಕಾರವನ್ನು ಹೊಡೆದೊಡಿಸಲು ನಿನಗಿಂತ ಶಕ್ತಿಶಾಲಿಯಾದ ವ್ಯಕ್ತಿ ನಿನಗೆ ಎದುರಾಗ ಬಹುದು. ಸಮಯವೆನ್ನುವುದು ಯಾವತ್ತು ಒಂದೆ ಸಮ ಇರೋದಿಲ್ಲ. ನೀನೇ ಸರ್ವಶಕ್ತಿವಂತನಲ್ಲ ಜಗತ್ತಿನಲ್ಲಿ ನಿನಗಿಂತ ತಿಳಿದವರು ಇದ್ದಾರೆ. ಹೀಗಾಗಿ ನಿನಗಿಂತ ಕೆಳಗಿನವರನ್ನು, ಅಶಕ್ತರನ್ನು ಕಂಡು ಎಂದಿಗೂ ಗೇಲಿ ಮಾಡಬೇಡ.
ಅವರನ್ನು ನಿರ್ಲಕ್ಷಿಸಬೇಡ ಎಂದು ಹೇಳುತ್ತಾನೆ ಕೃಷ್ಣ. ಗರ್ವ, ಸ್ವಾಭಿಮಾನ, ಅಹಂಕಾರ: ಇನ್ನು ಮುಂದುವರೆದು ಗರ್ವ, ಸ್ವಾಭಿಮಾನ, ಅಹಂಕಾರ ಬಗ್ಗೆ ಹೇಳಿರೋ  ಕೃಷ್ಣನು ಒಂದೊಂದು ಸಮಯದಲ್ಲಿ ಈ ಮೂರು ಪದಗಳು ಒಂದೇ ಅಂತ ಅನ್ಕೊಳ್ತಿವಿ ಆದರೆ ಅವುಗಳಲ್ಲಿ ಇರುವ ಅರ್ಥ ಅವುಗಳಿಂದ ಬರುವ ಫಲಿತಾಂಶ ಬೇರೆ ಬೇರೆಯಾಗಿ ಇರುತ್ತೆ ಈ ಮೂರು ನಿನ್ನ ಮೇಲಿನ ಪ್ರೀತಿ ಇಂದ ಪ್ರಾರಂಭ ಆಗುತ್ತೆ ನಿನ್ನ ಗುರಿಯನ್ನು ಸಾಧನೆ ಮಾಡಲು ಪಟ್ಟ ಕಷ್ಟ ನೆನಪಿಗೆ ಬಂದಾಗ ಈ ಕಷ್ಟ ಗರ್ವವನ್ನು ಹುಟ್ಟಿಸುತ್ತದೆ. ನಿನ್ನ ಗುರಿಯನ್ನು ಸಾಧಿಸಿದಾಗ ಬರುವ ಯಶಸ್ಸು ನಿನ್ನಲ್ಲಿ ಸ್ವಾಭಿಮಾನವನ್ನು ಹುಟ್ಟಿಸುತ್ತದೆ. ಸ್ವಾಭಿಮಾನ ಜಾಸ್ತಿ ಆದಾಗ ನಿಮ್ಮಲ್ಲಿ ಅಹಂಕಾರ ಅನ್ನುವುದು ಹುಟ್ಟುತ್ತೆ. ಇವನ್ನೂ ಎಷ್ಟು ಬೇಗ ಸಾಧ್ಯ ಆದರೆ ಅಷ್ಟು ಬೇಗ ಸರ್ವ ನಾಶ ಮಾಡಬೇಕು ಎಂದು.
ರಹಸ್ಯಗಳು : ಮನುಷ್ಯನ ಅತೀ ದೊಡ್ಡ ವೀಕ್ನೆಸ್ ಅವನ ಸೀಕ್ರೆಟ್ ಅಥವಾ ರಹಸ್ಯಗಳು. ಒಬ್ಬ ಮನುಷ್ಯ ಅದೆಷ್ಟೇ ಬಲಿಷ್ಠನಾಗಿರಲಿ ಆತನ ವಿನಾಶ ಆತನ ರಹಸ್ಯಗಳಲ್ಲೆ ಇರುತ್ತೆ. ನೀನು ಹೋಗುವ ದಾರಿಯಲ್ಲಿ ಈ ರಹಸ್ಯಗಳು ಅಡ್ಡ ಬರಬಹುದು ಶತ್ರುಗಳು ಹುಟ್ಟಬಹುದು ನಿನ್ನ ಶತ್ರು ನಿನ್ನನ್ನು ನಾಶ ಮಾಡಲು ನಿನ್ನ ಬಲಹೀನತೆ ಗಳನ್ನೂ ತಿಳಿಯಲು ಬಲವಂತ ಮಾಡುತ್ತಾನೆ ಯಾರು ಯಾವ ಸಮಯದಲ್ಲಿ ನಿನ್ನ ಶತ್ರು ಆಗುತ್ತಾನೆ ಹೇಳಲು ಸಾಧ್ಯ ಇಲ್ಲ. ಹೀಗಾಗಿ ನಿನ್ನ ರಹಸ್ಯಗಳನ್ನು ಕಾಪಾಡಿಕೊ ಎಂದು.
ಸತ್ಯ : ಸಮುದ್ರದಲ್ಲಿ ಇರುವ ನೀರು ಬಿಸಿಲಿಗೆ ಆವಿ ಆಗಿ ಮೋಡಕ್ಕೆ ಸೇರಿಕೊಳ್ಳುತ್ತದೆ ಇದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಈ ನೀರು ತುಂಬಾ ದೂರ ಪ್ರಯಾಣ ಮಾಡುತ್ತೆ. ಮೋಡಗಳು ಈ ನೀರನ್ನು ತನ್ನ ಹತ್ತಿರ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತದೆ. ಆದರೆ ಮೋಡಗಳು ಮಳೆಯ ಮೂಲಕ ಆ ನೀರನ್ನು ಭೂಮಿಗೆ ಸುರಿಯಲೇಬೇಕು. ಇದು ಪ್ರಕೃತಿಯ ನಿಯಮ. ಈ ರೀತಿಯಾಗಿ ಮನಸ್ಸು ಅನ್ನುವ ಮೋಡದಲ್ಲಿ ಸತ್ಯ ಅನ್ನುವ ನೀರನ್ನು ಮುಚ್ಚಿಟ್ಟರೆ ಅದಕ್ಕೆ ಕಾರಣ ಭಯ. ನೀನು ಸತ್ಯವನ್ನು ಎಷ್ಟೆ ಮುಚ್ಚೀಟ್ಟರು ಅದು ಯಾವುದೋ ಒಂದು ಸಮಯದಲ್ಲಿ ಹೊರಗೆ ಬಂದೇ ಬರುತ್ತೆ. ಇದು ನಮ್ಮ ಬದುಕಿನ ಬಗ್ಗೆ ಶ್ರೀಕೃಷ್ಣ ಹೇಳಿದ ತತ್ವಗಳು.
ಇವುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೆ ಬದುಕು ನೆಮ್ಮದಿಯಾಗಿರಲಿದೆ ಅನ್ನೋದು ಸತ್ಯ.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ,ಹಣಕಾಸು,ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601