ಕೇಂದ್ರ ಲಲಿತ ಕಲಾ ಅಕಾಡೆಮಿ ಚಿತ್ರಕಲಾ ಪ್ರದರ್ಶನ: ಆಸ್ಟ್ರೋ ಮೋಹನ್ ಅವರ ‘ಶುಭೋದಯ’ ಕಲಾಕೃತಿ ಆಯ್ಕೆ

ಉಡುಪಿ: ಕೇಂದ್ರ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ 62 ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ಉದಯವಾಣಿ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರ ಕಲಾಕೃತಿ ಶುಭೋದಯ ಪ್ರದರ್ಶನಗೊಂಡಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಿರ್ಮಿಸಲಾದ ಈ ಚಿತ್ರ ಕೃತಿ ಕಲಾಚಿತ್ರ ವಿಭಾಗದಲ್ಲಿ ಆಯ್ಕೆಗೊಂಡಿರುವುದು ಬಹು ಪ್ರಶಂಸೆಗೆ ಪಾತ್ರವಾಗಿದೆ. ದೇಶದ 2351 ಕಲಾವಿದರಿಂದ 5450 ಕಲಾಕೃತಿಗಳು ಆಯ್ಕೆಗೆ ಆಗಮಿಸಿದ್ದವು. ಅದರಲ್ಲಿ ಕೇವಲ 300 ಕಲಾಕೃತಿಗಳನ್ನು ಮಾತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು.