ಕಟಪಾಡಿ: ತೆಂಕಾರು ಮಾಗಣೆ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಫೆ. 6ರ ತನಕ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಫೆ.5 ರಂದು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಜರಗಲಿದೆ.
ಫೆ. 4 ರಂದು ಬೆಳಿಗ್ಗೆ 8ಕ್ಕೆ ಅಷ್ಟೋತ್ತರಶತ ಶ್ರೀ ನಾಗಧರ್ಮೇಂದ್ರ ಸ್ವಾಮೀಜಿಗಳು ವೃಂದಾವನದಲ್ಲಿ, ನಾಗದೇವರ ಸಾನ್ನಿಧ್ಯದಲ್ಲಿ ದೈವಗಳ ಸನ್ನಿಧಿಯಲ್ಲಿ ಕಲಶಾಭಿಷೇಕ ಜರಗಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 3 ರಿಂದ ವೈವಿಧ್ಯಮಯ ಕಾರ್ಯಕ್ರಮ, 4ರಿಂದ ಧಾರ್ಮಿಕ ಸಭೆ, ಸಂಜೆ 6ಕ್ಕೆ ತುಳುನಾಡ ವೈಭವ ನೃತ್ಯ ರೂಪಕ, ಬಳಿಕ ಯಕ್ಷಗಾನ – ಗಾನ – ನೃತ್ಯ ವೈಭವ ನಡೆಯಲಿದೆ.
ಫೆ. 5ರಂದು ಬೆಳಿಗ್ಗೆ 8.30ರಿಂದ ಕಲಶಾಭಿಷೇಕ ಆರಂಭ, 9,10ರಿಂದ 9.45ರ ಮೀನು ಲಗ್ನದಲ್ಲಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಜರಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರುಗಲಿದ್ದು, ಸಂಜೆ 3 ರಿಂದ ವೈವಿಧ್ಯಮಯ ಕಾರ್ಯಕ್ರಮ, ಧಾರ್ಮಿಕ ಸಭೆ, ರಂಗ ಪೂಜೆ, ರಾತ್ರಿ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ದೇಗುಲದ ಧರ್ಮದರ್ಶಿ ನವೀನ ಆಚಾರ್ಯ ಪಡುಬಿದ್ರಿ ತಿಳಿಸಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕರಂಬಳ್ಳಿ ವಿಶ್ವನಾಥ ಆಚಾರ್ಯ, ಪ್ರ. ಕಾರ್ಯದರ್ಶಿ, ಮೊಕ್ತೇಸರ ದಾಮೋದರ್ ಎಲ್. ಆಚಾರ್ಯ ಉಡುಪಿ, ಕಾರ್ಯದರ್ಶಿ ಬಿ. ಸುರೇಶ್ ಆಚಾರ್ಯ ಬಿಳಿಯಾರು, ಸುಧಾಕರ ಆಚಾರ್ಯ ಬಿಳಿಯಾರು, ವಿಜಯ ಆಚಾರ್ಯ ಪಡುಬಿದ್ರಿ ಉಪಸ್ಥಿತರಿರಲಿದ್ದಾರೆ.