ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಪುಷ್ಪರಾಜ್ ಎ. ನಾಯ್ಕ ಅವರು ತಮ್ಮದೇ ವಿಭಾಗದ ಪ್ರಾಧ್ಯಾಪಕ ಡಾ. ಉದಯಕುಮಾರ್ ಜಿ ಹಾಗೂ ಬಯೋಟೆಕ್ನಾಲಜಿ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಸಿ ವಾಮನ್ ರಾವ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ರೀಡ್ ಬೆಡ್ ಕಾನ್ಸೆಪ್ಟ್ ಆಫ್ ವಾಟರ್ ವೇಸ್ಟ್ ಟ್ರೀಟ್ಮೆಂಟ್ ಎಂಡ್ ಪ್ರೊಡಕ್ಷನ್ ಆಫ್ ಬಯೋಗ್ಯಾಸ್ ಫ್ರಮ್ ರೀಡ್ ಛಾಫ್ ಎಂಡ್ ಅದರ್ ಬ್ಲೆಂಡ್ಸ್” ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.