ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಸೇವಾಧಾಮದ ವತಿಯಿಂದ ಸಹಾಯ: ವಿಜಯ್ ಕೊಡವೂರು

ಉಡುಪಿ: ಸರಕಾರ ಮತ್ತು ಸೇವಾ ಭಾರತೀಯ ಅಂಗ ಸಂಸ್ಥೆಯಾಗಿರುವ ಸೇವಾಧಾಮ ಹೆರ್ಗ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲೆಯಲ್ಲಿ 80 ರಿಂದ 90 ಜನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು, ಔಷಧಿ ಮತ್ತು ಮೆಡಿಕಲ್ ಕಿಟ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ಅವರ ಮನೆಗೆ ತೆರಳಿ ನೀಡಿ, ಅವರಿಗೆ ಬೇಕಾಗುವಂತ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ.

ಪ್ರತಿ ತಿಂಗಳು ಆರೋಗ್ಯ ಅಧಿಕಾರಿಯೊಂದಿಗೆ 108 ಆಂಬುಲೆನ್ಸ್ ಮುಖಾಂತರ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ಕೆ ಉಡುಪಿ ಡಿ.ಎಚ್.ಒ ನಾಗಭೂಷಣ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮತ್ತು ಸೇವಾಧಾಮದ ನಿರ್ದೇಶಕ ವಿಜಯ್ ಕೊಡವೂರು ಮಾತನಾಡಿ, ಉಡುಪಿ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಜಿ.ಪ ಸಿಇಓ ಸೇವಾಧಾಮದ ಮನವಿಗೆ ಸ್ಪಂದಿಸಿದ್ದಾರೆ. ದಿವ್ಯಾಂಗರಲ್ಲಿ ಬೆನ್ನುಮೂಳೆ ಮುರಿತಕ್ಕೆ ಒಳಗಾದವರ ಬೇಕು ಬೇಡಗಳಿಗೆ ಧ್ವನಿಯಾಗುವಂತಹ ಸಂಸ್ಥೆ ಸೇವಾಧಾಮ. ಸೇವಾಧಾಮದ ಕಾರ್ಯಕರ್ತರು ಪ್ರತೀ ತಿಂಗಳು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಅವರ ಬೇಡಿಕೆಗಳನ್ನು ಪೂರೈಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದೇ ರೀತಿ ನಿಮ್ಮ ಮನೆ, ಪರಿಸರದಲ್ಲಿ ಅಥವಾ ನಿಮಗೆ ಪರಿಚಯದಲ್ಲಿ ಯಾರಾದರೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರು ಇದ್ದಲ್ಲಿ ಅವರ ಬಗ್ಗೆ ತಿಳಿಸಿದಲ್ಲಿ, ಸೇವಾ ಧಾಮದ ವತಿಯಿಂದ ಅವರಿಗೆ ಸಹಾಯ ಮಾಡುವ ಕಾರ್ಯವನ್ನು ಮಾಡುತ್ತೇವೆ ಎಂದು ಮನವಿ ಮಾಡಿದರು.

ಸೇವಾಧಾಮದ ಸದಸ್ಯರಾದ ಸಂಪತ್ ಭಟ್, ವಿಷ್ಣು ಭಟ್,ಅಶೋಕ್ ಶೆಟ್ಟಿಗಾರ್ ಕೊಡವೂರು, ಪ್ರಭಾತ್ ಕೊಡವೂರು, ಅಶೋಕ್ ಕಾರ್ಕಳ,ವಿಜಯ್ ಕೊಡವೂರು,ಉಡುಪಿ ಜಿಲ್ಲಾ ಆಂಬುಲೆನ್ಸ್ ಅಧಿಕಾರಿ ಮಡಿವಾಳ, ಸುದರ್ಶನ್ ಕೊಡವೂರು, ಮನು ಸೇವಾಧಾಮ ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.