ಹಡಿಲುಗದ್ದೆ ಕೃಷಿಯೋಜನೆಗೆ ಉಡುಪಿ-ಮಣಿಪಾಲ ರೋಟರಿಯಿಂದ ನೆರವು

ಉಡುಪಿ: ನಿಟ್ಟೂರು ಪ್ರೌಢ ಶಾಲೆ ತನ್ನ ಸುವರ್ಣಪರ್ವದ ನಿಮಿತ್ತ ಹಮ್ಮಿಕೊಂಡ 50 ಎಕರೆ ಹಡಿಲುಗದ್ದೆ ಬೇಸಾಯ ಯೋಜನೆಗೆ ಉಡುಪಿ-ಮಣಿಪಾಲ ರೋಟರಿ ಸಂಸ್ಥೆಯು ತನ್ನ ಸಾಮಾಜಿಕ ಸೇವೆಯ ಅಂಗವಾಗಿ ರೂ. 75,000/-ದ ದೇಣಿಗೆ ನೀಡಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಿತು.
ಪೆರಂಪಳ್ಳಿ ಗದ್ದೆಯ ಸನಿಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿಯ ಅಧ್ಯಕ್ಷ ಪ್ರಶಾಂತ ಹೆಗ್ಡೆ, ಕಾರ್ಯದರ್ಶಿ ಶ್ರೀಪತಿ ಪೂಜಾರಿ, ಸದಸ್ಯರುಗಳಾದ ರವಿ ಕಾರಂತ್, ಡಾ. ವಿರೂಪಾಕ್ಷ ದೇವರುಮನೆ, ಅಮಿತ್ ಅರವಿಂದ, ರಾಜವರ್ಮ ಅರಿಗ ಉಪಸ್ಥಿತರಿದ್ದು ಶಾಲೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಭಾಸ್ಕರ ಡಿ. ಸುವರ್ಣ, ಶಿಕ್ಷಕರಾದ ಎಚ್.ಎನ್ ಶೃಂಗೇಶ್ವರ, ಅಶೋಕ ಎಂ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ದಿನೇಶ್ ಪಿ. ಪೂಜಾರಿ, ಕಾರ್ಯದರ್ಶಿ ಪ್ರದೀಪ್ ಜೋಗಿ ಉಪಸ್ಥಿತರಿದ್ದರು.
ಉಡುಪಿ ಮಣಿಪಾಲ ರೋಟರಿ ಸಂಸ್ಥೆಯು ಈ ಹಿಂದೆಯೂ ಶಾಲೆಯ ಅಭಿವೃದ್ಧಿಗೆ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಿದ್ದನ್ನು ಶಾಲೆಯ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಅವರು ಸ್ಮರಿಸಿಕೊಂಡರು ಹಾಗೂ ಈ ನೆರವಿಗೆ ಕಾರಣಿಕರ್ತರಾದ ರೊಟೇರಿಯನ್ ಕರುಣಾಕರ ಶೆಟ್ಟಿ ಮತ್ತು ದಾನಿಗಳನ್ನು ಅಭಿನಂದಿಸಿದರು.