ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ರಿಲೀಸ್ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್ ಘೋಷಿಸಲಾಗಿದೆ.
ಪ್ರಮುಖ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು: ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರ ಕ್ಷೇತ್ರದಿಂದ ಡಿಕೆಶಿ ಅವರು ಸ್ಪರ್ಧಿಸಲಿದ್ದಾರೆ. ದೇವನಹಳ್ಳಿ ಎಸ್ ಸಿ ಕ್ಷೇತ್ರದಿಂದ ಕೆ.ಹೆಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಬಿಟಿಎಂ ಲೇಔಟ್ ನಿಂದ ರಾಮಲಿಂಗ ರೆಡ್ಡಿ, ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್ ಅವರಿಗೆ ಟಿಕೆಟ್ ನೀಡಲಾಗಿದೆ. ಚಾಮರಾಜಪೇಟೆ ಜಮೀರ್ ಅಹಮದ್, ಟಿ.ನರಸೀಪುರ ಹೆಚ್.ಸಿ.ಮಹದೇವಪ್ಪ, ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ, ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೊರಟಗೆರೆ ಮೀಸಲು ಕ್ಷೇತ್ರದಿಂದ ಜಿ.ಪರಮೇಶ್ವರ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಗಿದೆ. ಶಿವಾಜಿ ನಗರದಿಂದ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಲಾಗಿದೆ. ಜಯನಗರದಿಂದ ಸೌಮ್ಯ ರೆಡ್ಡಿ ಅವರಿಗೆ ʼಕೈʼ ಟಿಕೆಟ್ ನೀಡಿದೆ.
ಶಿರಾ ಕ್ಷೇತ್ರದಿಂದ ಟಿ.ಬಿ.ಜಯಚಂದ್ರ, ಬೀದರ್ ದಕ್ಷಿಣ ಕ್ಷೇತ್ರದಿಂದ ಅಶೋಕ್ ಖೇಣಿ,ರಾಜಾಜಿನಗರದಿಂದ ಪುಟ್ಟಣ್ಣ, ರಾಜರಾಜೇಶ್ವರಿ ಕ್ಷೇತ್ರದಿಂದ ಕುಸುಮಾ, ನಾಗಮಂಗಲ ಕ್ಷೇತ್ರದಿಂದ ಚಲುವರಾಯಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಮಾಗಡಿ ಕ್ಷೇತ್ರದಿಂದ ಹೆಚ್.ಸಿ.ಬಾಲಕೃಷ್ಣ,ನರಸಿಂಹರಾಜ ಕ್ಷೇತ್ರದಿಂದ ತನ್ವೀರ್ ಸೇಠ್ ಅವರಿಗೆ ಕೈ ಟಿಕೆಟ್ ನೀಡಿದೆ. ಚಾಮರಾಜನಗರದಿಂದ ಸಿ.ಪುಟ್ಟರಂಗ ಶೆಟ್ಟಿ, ಭಾಲ್ಕಿ ಈಶ್ವರ್ ಖಂಡ್ರೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಎಂ.ಬಿ.ಪಾಟೀಲ್ ಸ್ಪರ್ಧಿಸಲಿದ್ದಾರೆ. ಚಿಕ್ಕೋಡಿ ಸದಲಗ ಕ್ಷೇತ್ರದಿಂದ ಗಣೇಶ್ ಹಕ್ಕೇರಿ,ಯಮಕನಮರಡಿ ಕ್ಷೇತ್ರದಿಂದ(ಎಸ್ ಟಿ) ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲಿದ್ದಾರೆ. ಸಾಗರದಿಂದ ಬೇಳೂರು ಗೋಪಾಲ ಕೃಷ್ಣ, ಸೊರಬದಿಂದ ಮಧು ಬಂಗಾರಪ್ಪ, ಭಟ್ಕಳದಿಂದ ಮಂಕಾಳ ವೈದ್ಯ ಸ್ಪರ್ಧಿಸಲಿದ್ದಾರೆ.
ಮೊದಲು ಸಿದ್ದರಾಮಯ್ಯ ಸ್ಪರ್ಧಿಸಬೇಕಿದ್ದ ಕೋಲಾರ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಇನ್ನು ರಿವೀಲ್ ಮಾಡಿಲ್ಲ.
ಕರಾವಳಿಯ ಪ್ರಮುಖ ಕ್ಷೇತ್ರಗಳು:
ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆ,ಕುಂದಾಪುರ ಕ್ಷೇತ್ರಕ್ಕೆ ಎಂ.ದಿನೇಶ್ ಹೆಗ್ಡೆ,ಬೈಂದೂರು ಕ್ಷೇತ್ರದಿಂದ ಗೋಪಾಲ್ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರು ಯು.ಟಿ. ಖಾದರ್, ಸುಳ್ಯ ಎಸ್ ಸಿ ಮೀಸಲು ಕ್ಷೇತ್ರಕ್ಕೆ ಕೃಷ್ಣಪ್ಪ ಜಿ., ಬಂಟ್ವಾಳದಿಂದ ರಮಾನಾಥ್ ರೈ, ಮೂಡುಬಿದಿರೆ ಕ್ಷೇತ್ರದಿಂದ ಮಿಥುನ್ ರೈ,ಬೆಳ್ತಂಗಡಿ ಕ್ಷೇತ್ರದಿಂದ ರಕ್ಷಿತ್ ಶಿವರಾಮ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕುತೂಹಲ ಹುಟ್ಟಿಸಿರುವ ಉಡುಪಿ, ಕಾರ್ಕಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರದ ಅಭ್ಯರ್ಥಿಯನ್ನು ಈ ಪಟ್ಟಿಯಲ್ಲಿ ರಿವೀಲ್ ಮಾಡಿಲ್ಲ.
Here is the first list of Congress candidates finalised by the CEC for the forthcoming Karnataka assembly elections. pic.twitter.com/MeySmYLPev
— Congress (@INCIndia) March 25, 2023