ಗುವಾಹಟಿ: ಭಾರತದ ಈಶಾನ್ಯ ರಾಜ್ಯ ಅಸ್ಸಾಂ ಗುರುವಾರ ಒಂದೇ ಸ್ಥಳದಲ್ಲಿ ಸಾಂಪ್ರದಾಯಿಕ ಬಿಹು ನೃತ್ಯವನ್ನು ಪ್ರದರ್ಶಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಗುರುತಿಸಿದೆ. ಗುವಾಹಟಿಯ ಸರುಸಜೈ ಸ್ಟೇಡಿಯಂನಲ್ಲಿ ಗಿನ್ನೆಸ್ ಪುಸ್ತಕದಲ್ಲಿ ತನ್ನ ವಿಶ್ವ ದಾಖಲೆಯನ್ನು ನೋಂದಾಯಿಸುವ ಪ್ರಯತ್ನದಲ್ಲಿ 11,000 ಕ್ಕೂ ಹೆಚ್ಚು ಕಲಾವಿದರು, ಡೋಲು ವಾದಕರು ಮತ್ತು ನೃತ್ಯಗಾರರು ಭಾಗವಹಿಸಿದರು.
https://twitter.com/i/status/1647105773854416896
ಕಾರ್ಯಕ್ರಮದ ಸಮಯದಲ್ಲಿ, ಪ್ರದರ್ಶಕರಲ್ಲಿ ಗಾಯಕರು ಮತ್ತು ರಾಜ್ಯದ ಸಾಂಪ್ರದಾಯಿಕ ವಾದ್ಯಗಳಾದ ಧೋಲ್, ತಾಲ್, ಗೊಗೊನಾ, ಟೋಕಾ, ಪೆಪಾ ಮತ್ತು ಕ್ಸುತುಲಿ ಮುಂತಾದವುಗಳನ್ನು ನುಡಿಸುವವರು ಸೇರಿದ್ದರು. ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಪಟಲದಲ್ಲಿ ಇರಿಸುವ ಉದ್ದೇಶದಿಂದ ಬೃಹತ್ ಕಾರ್ಯಕ್ರಮಕ್ಕೆ ಉತ್ತಮ ಪ್ರದರ್ಶನಕಾರರನ್ನು ತರಲು ರಾಜ್ಯಾದ್ಯಂತ ಅಭ್ಯಾಸಗಳನ್ನು ನಡೆಸಲಾಗಿತ್ತು.
ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿರುವ ತರಬೇತುದಾರರು ಮತ್ತು ನೃತ್ಯಗಾರ್ತಿಯರು ಸೇರಿದಂತೆ ಪ್ರತಿಯೊಬ್ಬ ಭಾಗವಹಿಸುವವರೂ 25,000 ಅನುದಾನವನ್ನು ಪಡೆಯುತ್ತಾರೆ.
ಬಿಹು ಅಸ್ಸಾಂನ ಹೊಸವರ್ಷವಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.