ಕೇರಳ: ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೇರಳದ ಹೆಣ್ಣಾನೆ ದಾಕ್ಷಾಯಿಣಿ (88) ಫೆ. 5ರಂದು ಮೃತಪಟ್ಟಿದೆ.
ದಾಕ್ಷಾಯಿಣಿ ಟ್ರಾವಂಕೂರು ದೇವಸ್ಥಾನ ಮಂಡಳಿಗೆ ಸೇರಿದ ಹೆಣ್ಣಾನೆಯಾಗಿದ್ದು, ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎಂದು 2016ರಲ್ಲಿ ಗಿನ್ನೀಸ್ ದಾಖಲೆ ಬರೆದಿತ್ತು.
ಆದರೆ ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅದನ್ನು ತಿರುವನಂತಪುರ ಆನೆ ಬಿಡಾರದಲ್ಲಿ ಇಡಲಾಗಿತ್ತು. ಆದರೆ ದೇಗುಲಗಳ ಪ್ರತಿ ಉತ್ಸವಗಳಲ್ಲೂ ಇದು ಪಾಲ್ಗೊಳ್ಳುತ್ತಿತ್ತು. ಈ ಆನೆಯನ್ನು ಈ ಹಿಂದೆ ಟ್ರಾವಂಕೂರು ರಾಜಮನೆತನ ದೇವಸ್ಥಾನಕ್ಕೆ ಉಡುಗೊರೆಯನ್ನಾಗಿ ನೀಡಿದ್ದರು ಎನ್ನಲಾಗಿದೆ.