ಹಿರಿಯಡ್ಕ: ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರದ ತನಕದ ಶಿಕ್ಷಕರನ್ನು ಗೌರವಿಸಿದ್ದು, ಶ್ರೇಷ್ಠ ಕೆಲಸ. ನಾನು ಯತಿ ದೀಕ್ಷೆ ಪಡೆದ ನಂತರ ನೋಡಿದ ಅದ್ಭುತ ಕಾರ್ಯಕ್ರಮಗಳಲ್ಲಿ ಇದೂ ಒಂದು. ಲೋಕಕಲ್ಯಾಣಕ್ಕಾಗಿ ಆಶ್ಲೇಷಾ ಬಲಿ, ನವ ಚಂಡಿಕಾಯಾಗ ವಿದ್ವಾನ್ ಅಜಿತ್ ಆಚಾರ್ಯ ಪಂಚನಬೆಟ್ಟು ನೇತೃತ್ವದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ. ನಾಡಿಗೆ ಶುಭವಾಗಲಿ ಎಂದು ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಲೋಕ ಕಲ್ಯಾಣಕ್ಕಾಗಿ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞ ಶಾಲೆಯಲ್ಲಿ ನಡೆದ ಆಶ್ಲೇಷಾ ಬಲಿ, ನವ ಚಂಡಿಕಾಯಾಗದಲ್ಲಿ ಆಶೀರ್ವಚನ ನೀಡಿದರು.
ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ರಾಷ್ಟ್ರದ ಒಳಿತಿಗಾಗಿ ಯುವಕರು ಸದಾ ಸಿದ್ಧರಾಗಿ ಸೇವೆ ಮಾಡಬೇಕು. ಧರ್ಮದ ಕೆಲಸವೂ ರಾಷ್ಟ್ರ ಸೇವೆಯಾಗಿದೆ ಎಂದರು.
ವಿದ್ವಾನ್ ಶ್ರೀಧರ ಭಟ್, ವಿದ್ವಾನ್ ಹೆಬ್ರಿ ಚಂದ್ರಕಾಂತ ತಂತ್ರಿ, ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಹಕಾರ ರತ್ನ ಯಶ್ ಪಾಲ್ ಸುವರ್ಣ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಭೇಟಿ ನೀಡಿದರು. ಸಂತೋಷ ಮೂಲ್ಯ, ಶ್ರೀಧರ ಆಚಾರ್ಯ, ಅಶೋಕ ಆಚಾರ್ಯ, ನಿತಿನ್ ಶೆಟ್ಟಿಗಾರ್, ಪ್ರತಾಪ್ ನಾಯ್ಕ್, ಸಂತೋಷ್ ನಾಯ್ಕ್, ಅರುಣ್ ನಾಯ್ಕ್, ಪ್ರಶಾಂತ್ ಶೆಟ್ಟಿಗಾರ್ ತೋಟ, ರಾಜೇಶ್ ಕಾಮತ್, ಸಿರೀಶ್ ಆಚಾರ್ಯ, ಅರುಣ್ ಆಚಾರ್ಯ, ಸಂದೇಶ್ ಕುಲಾಲ್ ಪಂಚನಬೆಟ್ಟು ಉಪಸ್ಥಿತರಿದ್ದರು. ಎ. ನರಸಿಂಹ ಸ್ವಾಗತಿಸಿ, ಅಜಿತ ಆಚಾರ್ಯ ಪಂಚನಬೆಟ್ಟು ವಂದಿಸಿದರು. ದಾಮೋದರ ಶರ್ಮ ನಿರೂಪಿಸಿದರು.