ಜಿ.ಎಸ್.ಬಿ ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಆಶಾ ಶೆಣೈ ಆಯ್ಕೆ

ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಇಲ್ಲಿನ ಜಿ.ಎಸ್.ಬಿ ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಆಶಾ ಶೆಣೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಲತಾ, ಕಾರ್ಯದರ್ಶಿಯಾಗಿ ಗೀತಾ, ಖಜಾಂಚಿಯಾಗಿ ಶೈಲಜಾ ಪೈ ಹಾಗೂ ಇತರ ಪಧಾಧಿಕಾರಿಗಳ ಆಯ್ಕೆ ಭುವನೇಂದ್ರ ಮಂಟಪದಲ್ಲಿ ಜರುಗಿತು.

ಮಂಡಳಿಯ ಮಾಜಿ ಅಧ್ಯಕ್ಷೆ ಸುಧಾ ಶೆಣೈ ಹಾಗೂ ಗೌರವಾಧ್ಯಕ್ಷೆ ಪ್ರಭಾ ಶೆಣೈ , ಮಹಿಳಾ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು.