ನವೆಂಬರ್ 2022 ರಲ್ಲಿ, ಭಾರತೀಯ ಪ್ರಯಾಣಿಕ ವಾಹನ ವಿಭಾಗವು 16 ಸಮೂಹ-ಮಾರುಕಟ್ಟೆ ಕಾರು ತಯಾರಕರಲ್ಲಿ 10 ತಯಾರಕರ ಸಗಟು ಸಂಖ್ಯೆಗಳೊಂದಿಗೆ 310,580 ಯುನಿಟ್ಗಳನ್ನು ಸೇರಿಸಿ ವರ್ಷಾನುವರ್ತಿ 32 ಪ್ರತಿಶತದಷ್ಟು ಮಾರಾಟವನ್ನು ದಾಖಲಿಸಿದೆ.
ಸೆಮಿಕಂಡಕ್ಟರ್ ಗಳ ಉತ್ತಮ ಪೂರೈಕೆಯ ಪರಿಣಾಮವಾಗಿ ಹೆಚ್ಚಿನ ಕಾರು ತಯಾರಕರಿಗೆ ಸುಧಾರಿತ ಉತ್ಪಾದನೆ ಮಾಡಲು ಸಹಾಯ ಮಾಡುವುದರ ಜೊತೆಗೆ ಹೆಚ್ಚಿನ ಬೆಳವಣಿಗೆಯ ದರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಇದಕ್ಕಿಂತ ಹೆಚ್ಚಾಗಿ, ಕೇವಲ ಮೂರು ಪ್ರಮುಖ ಕಾರು ತಯಾರಕರಾದ – ಮಾರುತಿ ಸುಜುಕಿ, ಮಹೀಂದ್ರಾ & ಮಹೀಂದ್ರ ಮತ್ತು ಟಾಟಾ ಮೋಟಾರ್ಸ್ ನ ಜನಪ್ರಿಯ ಮಾದರಿಗಳ ಸಂಯೋಜಿತ ಬ್ಯಾಕ್ಲಾಗ್ 750,000 ಯುನಿಟ್ಗಳಷ್ಟಿವೆ. ಅಂದರೆ ಈ ಆರ್ಥಿಕ ವರ್ಷದ ಅಂತ್ಯಕ್ಕೆ 3.8 ಮಿಲಿಯನ್ ಕಾರು ಮಾರಾಟದ ದಾಖಲೆಯನ್ನು ಭಾರತೀಯ ಪ್ರಯಾಣಿಕ ವಾಹನವು ಸಾಧಿಸಲಿದೆ.
ಭಾರತದ ಅಗ್ರ ಆರುಕಾರು ತಯಾರಿಕರು – ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ, ಕಿಯಾ ಮತ್ತು ಟೊಯೋಟಾ ಸೇರಿ ನವೆಂಬರ್ನಲ್ಲಿ ಒಟ್ಟು 292,617 ಯುನಿಟ್ಗಳು ಒಟ್ಟು ಮಾರಾಟದ 94 ಪ್ರತಿಶತವನ್ನು ಹೊಂದಿದೆ, ಇದರಲ್ಲಿ ಮಾರುತಿ ಸುಜುಕಿ ಒಂದೇ 42 ಪ್ರತಿಶತದಷ್ಟು ಪಾಲನ್ನು ಹೊಂದಿದೆ.
ಮಾರುತಿ ಸುಜುಕಿ – 132,395 ಯೂನಿಟ್/ 21 ಪ್ರತಿಶತ ಬೆಳವಣಿಗೆ
ಮಾರುತಿ ಸುಜುಕಿ ನವೆಂಬರ್ 2022 ರಲ್ಲಿ 132,395 ಯುನಿಟ್ಗಳ ಸಗಟು ಮಾರಾಟವನ್ನು ವರದಿ ಮಾಡಿದೆ, ಇದು ಕಳೆದ ವರ್ಷಕ್ಕಿಂತ 21 ಪ್ರತಿಶತ ಹೆಚ್ಚಳವಾಗಿದೆ.
ಹುಂಡೈ – 48,003 ಯುನಿಟ್ಗಳು / 30 ಪ್ರತಿಶತ
ಹುಂಡೈನ 48,003 ಯುನಿಟ್ಗಳು ವರ್ಷಾನುವರ್ತಿ 30 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿವೆ.
ಟಾಟಾ ಮೋಟಾರ್ಸ್ – 46,037 ಯುನಿಟ್ ಗಳು / 30 ಪ್ರತಿಶತ
ಟಾಟಾ ಮೋಟಾರ್ಸ್ ನವೆಂಬರ್ 2022 ರಲ್ಲಿ 46,037 ಯುನಿಟ್ಗಳ ಮಾರಾಟವನ್ನು ವರದಿ ಮಾಡಿದೆ, ಇದು ಎರಡನೇ ಸ್ಥಾನದಲ್ಲಿರುವ ಹುಂಡೈಗಿಂತ ಕೇವಲ 1,966 ಯುನಿಟ್ ಹಿಂದಿದೆ. ಟಾಟಾ ವರ್ಷದಿಂದ ವರ್ಷಕ್ಕೆ 55 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ ಮತ್ತು ನವೆಂಬರ್ 2021 ರಲ್ಲಿ ಕಾರು ತಯಾರಕರು ಮಾರಾಟ ಮಾಡಿದ 29,778 ಯುನಿಟ್ಗಳಿಗಿಂತ ಇದು ಒಟ್ಟು 16,259 ಯುನಿಟ್ಗಳು ಹೆಚ್ಚಾಗಿದೆ. ಟಾಟಾ ಮೋಟಾರ್ಸ್ ನ ಎಲೆಕ್ಟ್ರಿಕ್ ವಾಹನಗಳು ಇತರ ಕಾರು ತಯಾರಕರ ಮೇಲೆ ಬಲವಾದ ಪೈಪೋಟಿಯನ್ನು ಒಡ್ಡುತ್ತಿವೆ.
ಮಹೀಂದ್ರಾ & ಮಹೀಂದ್ರಾ – 30,392 ಘಟಕಗಳು / 56 ಪ್ರತಿಶತ
ಮಹೀಂದ್ರಾ ನವೆಂಬರ್ 2022 ರಲ್ಲಿ 30,238 ಎಸ್.ಯು.ವಿ ಗಳನ್ನು ಮಾರಾಟ ಮಾಡಿದೆ. ಬೆಳವಣಿಗೆ 56 ಪ್ರತಿಶತದಷ್ಟು ಹೆಚ್ಚಾಗಿದೆ. ಕಂಪನಿಯು 154 ಇ-ವೆರಿಟೊಗಳನ್ನು ಮಾರಾಟ ಮಾದಿ ನವೆಂಬರ್ನಲ್ಲಿ ಒಟ್ಟು 30,392 ಯುನಿಟ್ಗಳನ್ನು ಮಾರಿದೆ. ಏಪ್ರಿಲ್-ನವೆಂಬರ್ 2022 ರ ಅವಧಿಗೆ, ಸಂಚಿತ ಎಸ್.ಯುವಿ ಮಾರಾಟವು 229,516 ಯುನಿಟ್ಗಳಾಗಿದ್ದು, ಇದು 75 ಶೇಕಡಾ ಹೆಚ್ಚಾಗಿದೆ.
ಇತರ ಕಾರುಗಳ ಮಾರಾಟ
ಕಿಯಾ – 24,025 ಯೂನಿಟ್ಗಳು / 69 ಪ್ರತಿಶತ
ಟೊಯೋಟಾ– 11,765 ಘಟಕಗಳು / -10 ಪ್ರತಿಶತ
ಹೋಂಡಾ – 7,051 / 29 ಶೇಕಡಾ
ಸ್ಕೋಡಾ – 4,433 ಘಟಕಗಳು / 64 ಪ್ರತಿಶತ
MG ಮೋಟಾರ್ – 4,079 ಘಟಕಗಳು / 64.4 ಶೇಕಡಾ
ನಿಸ್ಸಾನ್ – 2,400 ಘಟಕಗಳು / -9 ಶೇಕಡಾ
ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ 2,594,665 ಯುನಿಟ್ಗಳ ಸಂಚಿತ ಮಾರಾಟದೊಂದಿಗೆ, ಭಾರತೀಯ ಪ್ರಯಾಣಿಕ ವಾಹನ ವಿಭಾಗವು ಸುಮಾರು 3.8 ಮಿಲಿಯನ್ ಯುನಿಟ್ಗಳ ದಾಖಲೆಯ ಮಾರಾಟದತ್ತ ಸಾಗುತ್ತಿದೆ. 2019 ರ ಹಣಕಾಸು ವರ್ಷದಲ್ಲಿ ಭಾರತೀಯ ಪ್ರಯಾಣಿಕ ವಾಹನ ವಿಭಾಗದ ಅತ್ಯುತ್ತಮ ಮಾರಾಟವು 3.37(33,77,436 ) ಮಿಲಿಯನ್ ಯುನಿಟ್ಗಳಾಗಿತ್ತು. ಈ ಸಂಖ್ಯೆಯನ್ನು ತಲುಪಲು ಕಷ್ಟವೇನಲ್ಲ. ಸುಮಾರು 750,000 ಯೂನಿಟ್ ಕಾರುಗಳ ಬ್ಯಾಕ್ ಲಾಗ್ ಇನ್ನೂ ಇದ್ದು ಈ ದೂರವನ್ನು ಮಾರ್ಚ್ 2023 ರ ಅಂತ್ಯದವರೆಗೆ ನಾಲ್ಕು ತಿಂಗಳಿನ ಅವಧಿಯಲ್ಲಿ ತಲುಪಬಹುದು ಎಂದು ಅಟೋಕಾರ್ ಇಂಡಿಯಾ ವರದಿ ಮಾಡಿದೆ.