￰ಚೈನೀಸ್ ಆಪ್ ನಿಷೇಧಿಸಲು ಚಪ್ಪಾಳೆ ಹೊಡೆಯುವುದನ್ನು ಮೊದಲು ನಿಲ್ಲಿಸಿ: ಡಾ.ಶಶಿಕಿರಣ್ ಶೆಟ್ಟಿ ಬರಹ

ಈಗ ಎಲ್ಲಾ ಕಡೆ ಕೇಳುತ್ತಿರುವ ಕೂಗು ಒಂದೇ, ನಮ್ಮ ಸೈನಿಕರನ್ನು ಕೊಂದ ಪಾಪಿ ಚೀನಾದ ಆಪ್ ನಿಲ್ಲಿಸಿ ಎಂದು, ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಲ್ಲ ಅಂತಾರಾಷ್ಟ್ರೀಯ ಕಾನೂನು ಇದಕ್ಕೆ ಅಡ್ಡಿಯಾಗಬಹುದು.

ಅದಕ್ಕೆ ನಾವೇ ಜಾಗೃತಗೊಳ್ಳಬೇಕಿದೆ. ಅಮೇರಿಕಾದ 2 ಅಣು ಬಾಂಬ್ ಬಿದ್ದ ದಿನವೇ ಜಪಾನ್ ನ ಜನರು ಅಮೇರಿಕಾದ ವಸ್ತುಗಳನ್ನು ಮುಟ್ಟುವುದನ್ನೇ ಬಿಟ್ಟಿದ್ದಾರೆ. ಇಂದು ಒಂದು ಅಮೇರಿಕಾದ ಸೂಜಿ ಕೂಡ ಜಪಾನ್ ಅಲ್ಲಿ ಮಾರಾಟವಾಗುತಿಲ್ಲ, ಜಪಾನ್ ಜನರಿಗಾದದ್ದು ಭಾರತೀಯರಿಗೇಕೆ ಆಗುತಿಲ್ಲ? ಕೇವಲ ಟಿಕ್ ಟಾಕ್ ಒಂದೇ ಆಪ್ ನಿಂದ ಸಾವಿರಾರು ಕೋಟಿಯಷ್ಟು ಹಣ ನಾವು ಚೀನಾಕ್ಕೆ ಕೊಡುತ್ತಿದ್ದೇವೆಂದರೆ ನಿಜಕ್ಕೂ ಇದು ನಾಚಿಗೆಯ ವಿಷಯ ಅಲ್ಲವೇ?


ಟಿಕ್ ಟಾಕ್ ಟಾಕ್ ನಿಷೇಧಿಸಲು ನಾವೇನು ಮಾಡಬಹುದು?
ನೆನಪಿಡಿ ನಾಟಕಕ್ಕೆ ಚಪ್ಪಾಳೆ ಸಿಕ್ಕರೆ ಮಾತ್ರ ನಾಟಕ ಮುಂದುವರಿಯುತ್ತದೆ, ಚಪ್ಪಾಳೆ ಕೊಡುವುದ ನಿಲ್ಲಿಸಿ ಬಿಡಿ. ಆಗ ನೋಡಿ ಮುಂದಿನ ಕೆಲವೇ ದಿನಗಳಲ್ಲಿ ನಾಟಕವೇ ನಿಂತಿರುತ್ತದೆ! ಈ ಟಿಕ್ ಟಾಕ್ ನ ಪ್ರಿಯರಿಗೂ ಚಪ್ಪಾಳೆ ಅಷ್ಟೇ ಬೇಕಿರುವುದು, ನೀವು ಇಷ್ಟೇ ಮಾಡಿ ನಿಮ್ಮ ಯಾವುದೇ ಪರಿಚಿತ ಗ್ರೂಪ್ ಗೆ ಯಾರಾದರೂ ಟಿಕ್ ಟಾಕ್ ವಿಡಿಯೋ ಕಳುಹಿಸಿದರೆ ಚಪ್ಪಾಳೆ ಕೊಡಬೇಡಿ, ಬದಲಾಗಿ ಖಡಕ್ ಆಗಿ ಅದನ್ನು ವಿರೋಧಿಸಿ, ಮತ್ತೆ ಆ ವ್ಯಕ್ತಿ ಟಿಕ್ ಟಾಕ್ ಮಾಡದಂತೆ ಎಚ್ಚರಿಸಿ ಅಡ್ಮಿನ್ ಮೇಲೆ ಒತ್ತಡ ಹಾಕಿ ಮತ್ತು ಸಮಸ್ಯೆಯಾದರೆ ಆ ವ್ಯಕ್ತಿಯನ್ನು ಗುಂಪಿನಿಂದ ಹೊರ ಹಾಕುವಂತೆ (ಹೊರ ಹೋಗುವಂತೆ ) ಪ್ರೇರೇಪಿಸಿ. ನೀವು ಅಡ್ಮಿನ್ ಗಳಾಗಿರುವ ಗುಂಪುಗಳಲ್ಲಿ ಟಿಕ್ ಟಾಕ್ ವಿಡಿಯೋ ಗಳನ್ನೂ ನಿರ್ಬಂಧಿಸಿ.

ಆ ಮೇಲೆ ನೋಡಿ, ಮುಂದಿನ 3,4 ತಿಂಗಳಲ್ಲೇ ಈ ನಾಟಕ ಕಂಪೆನಿ ನಮ್ಮೂರಿಂದ ಮಾತ್ರವಲ್ಲ ದೇಶದಿಂದಲೇ ಡೇರೆ ಮುಚ್ಚಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಇದು ಆರಂಭ ಮಾತ್ರ, ಅದೇ ತರ ಚೀನಾದ ಪ್ರತಿಯೊಂದು ವಸ್ತುಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸೋಣ. ಆಗ ಮಾತ್ರ ಸ್ವರ್ಗದಲ್ಲಿರುವ ಭಾರತೀಯ ಯೋಧರಿಗೆ ನಿಜಾರ್ಥದಲ್ಲಿ ಶ್ರದ್ದಾoಜಲಿ ಅರ್ಪಿಸಿದಂತಾಗುತ್ತದೆ.

ಡಾ.ಶಶಿಕಿರಣ್ ಶೆಟ್ಟಿ ಹೋಂ ಡಾಕ್ಟರ್ ಫೌಂಡೇಶನ್ ಕೊಳಲಗಿರಿ,ಉಡುಪಿ