ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಾವು ದೇಶಕ್ಕೆ ಕೊಡುವ ದೊಡ್ಡ ಗೌರವ: ರಶ್ಮಿತಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ರಶ್ಮಿತಾ, ಪತ್ರಿಕೋದ್ಯಮ ವಿದ್ಯಾರ್ಥಿನಿ ಎಂಪಿಎಂ ಕಾಲೇಜು ಕಾರ್ಕಳ

ಆಗಸ್ಟ್ 15 ಇಡೀ ಭರತ ಖಂಡದಲ್ಲಿರೋ  ನಾವೆಲ್ಲರೂ ಒಂದೇ ಅನ್ನುವ ಐಕ್ಯತಾ ಭಾವದಿ ಸಂಭ್ರಮಿಸುವ ದೇಶದ ಹೆಮ್ಮೆಯ ದಿನ. ಎಷ್ಟೋ ಹೋರಾಟಗಾರರ ತ್ಯಾಗದ ಗುರುತೇ ಈ ಸ್ವಾತಂತ್ರ್ಯ. ಸ್ವಾತಂತ್ರ್ಯ ಅನ್ನುವುದು ಕೇವಲ ಒಂದು ಪದವಲ್ಲ ಬದಲಿಗೆ ಎಷ್ಟೋ ಜನರ ನೆತ್ತರ ಕುರುಹು. ಒಗ್ಗಟ್ಟು ಭ್ರಾತೃತ್ವ  ಶಾಂತಿ ದೇಶ ಪ್ರೇಮದ ಸಂದೇಶ ಸಾರುವ ಭಾರತದ ಹೆಮ್ಮೆಯ ಹಬ್ಬ. ಬಾಲ್ಯದ ದಿನಗಳಲ್ಲಿ  ಸ್ವಾತಂತ್ರ್ಯ ದಿನಾಚರಣೆ ಅಂದರೆ ಕೇವಲ ಮೆರವಣಿಗೆ ಬಹುಮಾನ ವಿತರಣೆ ಸಿಹಿ ತಿನಿಸು ಬರಿ ಇಷ್ಟಕ್ಕೆ ಮನಸು ಸೀಮಿತವಾಗಿತ್ತು.ಆದರೆ ಅದರಾಚೆಗಿದ್ದ  ಕುತೂಹಲ ಇವೆಲ್ಲದರ ಮುಂದೆ ಮರೆಯಾಗಿತ್ತು. ಸ್ವಾತಂತ್ರ  ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿ ದಿನ ಪ್ರತಿ ಕ್ಷಣ ದೇಶಕ್ಕಾಗಿ ಪ್ರಾಣ ತೆತ್ತ ಭಾರತಾಂಬೆಯ ಹೆಮ್ಮೆಯ ಪುತ್ರರ ಸ್ಮರಿಸಬೇಕು.

ಅವರ ತ್ಯಾಗ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ‌ಬೇಕು. ನಮ್ಮ ದೇಶಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸ ಬೇಕು. ಆಗ ಮಾತ್ರ ಅದೆಷ್ಟೋ ಜನ ಹೋರಾಟಗಾರರ ತ್ಯಾಗಕ್ಕೆ ದೇಶ ಪ್ರೇಮಕ್ಕೆ  ನಾವು ಸಲ್ಲಿಸುವ ನಿಜವಾದ ಗೌರವ. ನಮ್ಮ ದೇಶಕ್ಕಾಗಿ ನಾವು ಹೋರಾಟವನ್ನು ಮಾಡಲು ಮುಂದೆ ಬರಬೇಕು. ಯಾವುದೇ ಭಯ ಇರಬಾರದು, ನಮ್ಮ ದೇಶ ನಮ್ಮ ಹೆಮ್ಮೆ.