udupixpress
Home Trending ಕೋಟೇಶ್ವರದಲ್ಲಿ ಮೂವರು ಗಾಂಜಾ ಪೆಡ್ಲರ್ ಗಳ ಬಂಧನ: 1.1 ಕೆಜಿ ಗಾಂಜಾ ವಶ

ಕೋಟೇಶ್ವರದಲ್ಲಿ ಮೂವರು ಗಾಂಜಾ ಪೆಡ್ಲರ್ ಗಳ ಬಂಧನ: 1.1 ಕೆಜಿ ಗಾಂಜಾ ವಶ

ಕುಂದಾಪುರ: ಇಲ್ಲಿನ ಕೋಟೇಶ್ವರದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವವರನ್ನು ಪೋಲೀಸರು ಬಂಧಿಸಿದ್ದು, ಅವರಿಂದ  1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮೂಡುಗೋಪಾಡಿ ಗ್ರಾಮದ ಮುಷ್ರೀಫ್ ಅಹಮದ್ (24), ವಿಟ್ಟಲ್ವಾಡಿ ಶ್ರೇಯಸ್ ದೇವಾಡಿಗ (23) ಮತ್ತು ಕೋಟೇಶ್ವರ ಮೂಲದ ಪ್ರೀತಮ್  ಅಲಿಯಾಸ್ ಪ್ರೀತು (23) ಬಂಧಿತ ಆರೋಪಿಗಳು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸದಾಶಿವ ಗೌರೋಜಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದರು. ಈ ಮೂವರು ಆರೋಪಿಗಳು ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಕೋಟೇಶ್ವರದ ದ್ವಿಚಕ್ರ ವಾಹನ ಮಾರಾಟ ಮಳಿಗೆ ಬಳಿ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಗ್ರಾಹಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.