ಬೆಂಗಳೂರು: ಬೆಂಗಳೂರಿನ ಕೋರಮಂಗಲ ದಲ್ಲಿ ನಡೆದ 4 ನೇ ಯ ದಕ್ಷಿಣ ಭಾರತ ಕರಾಟೆ ಚಾಂಪಿನ್ಶಿಪ್ ನಲ್ಲಿ ಕುಂದಾಪುರದ ಅರ್ನೋನ್ ಡಿ ಆಲ್ಮೆಡಾ, 11 ರ ವಯೋಮಿತಿಯ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 11 ವಯೋಮಿತಿಯ -40 ಕೆ ಜಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಕುಂದಾಪುರದ ವಿಲ್ಸನ್ ಹಾಗೂ ಜ್ಯೋತಿ ಡಿ ಆಲ್ಮೆಡ ಅವರ ಪುತ್ರನಾಗಿದ್ದು, ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಇವರಿಗೆ ಕುಂದಾಪುರದ ಕೆ ಡಿ ಎಫ್ ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ. ಕೆ, ಸೆನ್ ಸಾಯಿ ಶಿಹಾನ್ ಶೇಖ್ ಬಸ್ರುರ್ ಅವರು ತರಬೇತಿ ನೀಡಿದ್ದರು.












