ಅರಿವು (ರಿನ್ಯೂವಲ್) ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ಡಿ-ಸಿ.ಇ.ಟಿ, ಪಿಜಿ-ಸಿ.ಇ.ಟಿ ಹಾಗೂ ನೀಟ್ ಸ್ನಾತಕೋತ್ತರ ಕೋರ್ಸುಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್), ದಂತ ವೈದ್ಯಕೀಯ (ಬಿ.ಡಿ.ಎಸ್, ಎಂ.ಡಿ.ಎಸ್), ಆಯುಷ್ (ಬಿ.ಆಯುಷ್, ಎಂ.ಆಯುಷ್), ಇಂಜಿನಿಯರಿoಗ್ & ಟೆಕ್ನಾಲಜಿ (ಬಿ.ಇ, ಬಿ.ಟೆಕ್, ಎಂ.ಇ., ಎಂ.ಟೆಕ್), ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ್, ಎಂ.ಆರ್ಕ್), ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿ.ಎಸ್ಸಿ ಅಗ್ರಿಕಲ್ಚರ್, ಅಗ್ರಿ ಕಲ್ಚರ್ ಎಂಜಿನಿಯರಿoಗ್, ಹಾರ್ಟಿಕಲ್ಚರ್, ಡೈರಿ ಟೆಕ್ನಾಲಜಿ, ಫಾರೆಸ್ಟಿ, ವೆಟರ್ನರಿ & ಅನಿಮಲ್ ಸೈನ್ಸ್, ಫುಡ್ ಟೆಕ್ನಾಲಜಿ, ಬಯೋಟೆಕ್ನಾಲಜಿ, ಫಿಶರೀಸ್, ಸೆರಿಕಲ್ಚರ್, ಹೋಮ್/ಕಮ್ಯುನಿಟಿ ಸೈನ್ಸಸ್, ಫುಡ್, ನ್ಯೂಟ್ರಿಷನ್ & ಡಯಟಿಕ್ಸ್, ಅಗ್ರಿಕಲ್ಚರ್ ಇಂಜಿನಿಯರಿoಗ್, ಬಿ.ಫಾರ್ಮಾ, ಎಂ.ಫಾರ್ಮಾ, ಫಾರ್ಮಾ ಡಿ, ಡಿ ಫಾರ್ಮಾಗಳಲ್ಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ನಿಗಮದ ವೆಬ್‌ಸೈಟ್ https://kmdclonline.karnataka.gov.inನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದ ಸಾಲದ ಮೊತ್ತದ ಶೇ.12 ರಷ್ಟನ್ನು ಪಾವತಿಸಿ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಸಮುದಾಯವನ್ನು ಹೊರತುಪಡಿಸಿ) ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಹಾಗೂ ರಿನ್ಯೂವಲ್ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ.್ಲ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬoಧಿಸಿದ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಮೌಲಾನಾ ಅಜಾದ್ ಭವನ, 1ನೇ ಮಹಡಿ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ಇಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277799990, ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ: 0820-2574990, ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂ.ಸಂಖ್ಯೆ: 0820-2574596 ಅಥವಾ ಕಾರ್ಕಳ (ದೂ.ಸಂಖ್ಯೆ: 08258-231101) ಹಾಗೂ ಕುಂದಾಪುರ (ದೂ.ಸಂಖ್ಯೆ: 08254-230370), ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಪ್ರಕಟಣೆ ತಿಳಿಸಿದೆ.