ಫೆ.27ರಂದು ‘ಅರೆಹೊಳೆ ಯಕ್ಷ ಸಂಜೆ’ -2022

ಅರೆಹೊಳೆ ಪ್ರತಿಷ್ಠಾನವು ಫೆಬ್ರವರಿ 27ರ ಭಾನುವಾರ ಸಂಜೆ 2.30ರಂದು ಕೆಂಜುರು ಸಮೀಪದ ಬಲ್ಲೇಬೈಲ್ಲಿನಲ್ಲಿ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಂದಗೋಕುಲ ಯಕ್ಷಗಾನ ತರಬೇತಿ ಕೇಂದ್ರದ ಅರೆಹೊಳೆ ಯಕ್ಷ ಸಂಜೆ 2022ರನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಶ್ರೀ ಐರೋಡಿ ಮಂಜುನಾಥ ಕುಲಾಲ್ ಯೆಡ್ತಾಡಿ ಇವರಿಗೆ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ ಪ್ರಧಾನಿಸಲಾಗುವುದು.

ಈ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ ಲಂಕಿಣಿ ಮೋಕ್ಷ ಪ್ರಾತ್ಯಕ್ಷಿಕೆಗಳು ಯಕ್ಷಗಾನ ಗುರು ಮಿಥುನ ಹಂದಾಡಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿವೆ. ನಂತರ ಯಕ್ಷಭಿನಯ ಬಳಗ ಮಂಗಳೂರು ಇವರಿಂದ ಶ್ರೀ ಐರೋಡಿ ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ‘ಧ್ರುವ ಚರಿತ್ರೆ’ ಏನ್ನುವ ಯಕ್ಷಗಾನ ಪ್ರದರ್ಶನವು ನಡೆಯಲಿದೆ.

ಹಿಮ್ಮೇಳದಲ್ಲಿ ಪ್ರಸಾದ್ ಕುಮಾರ್ ಮುದ್ರಾಡಿ, ಪ್ರಸಾದ್ ಕುಮಾರ್ ಮೋಗೆಬೆಟ್ಟು, ಭರತ್ ಚಂದನ್ ಕೋಟೇಶ್ವರ ಮತ್ತು ಶ್ರೀಕಾಂತ್ ಶೆಟ್ಟಿ ಎಡಮೋಗ್ಗೆ ಸಹಕರಿಸಲಿದ್ದರೆ. ಹಾಗೆಯೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ರವಿ ರಾಜ್ ಅವರನ್ನು ಅಭಿನಂದಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿರುವ ಹರಿಕೃಷ್ಣ ಪುನರೂರು, ಸಲಹೆಗಾರರಾಗಿರುವ ಕೆ.ಸಿ.ಪ್ರಭು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಇವರು ಭಾಗವಹಿಸಲಿದ್ದು ಅಭಿನಂದನಾ ಭಾಷಣವನ್ನು ದೇವು ಹನೆಹಳ್ಳಿಯವರು ಮಾಡಲಿದ್ದಾರೆ ಎಂದು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.