ನಿಮಗೆ ಜಪಾನೀಸ್ ಭಾಷೆ ಕಲಿಯಲು ಆಸಕ್ತಿ ಇದೆಯಾ?ಮಣಿಪಾಲದ MSDC ಯಿಂದ ಜೂ.12ರಂದು ಉಚಿತ ಜಪಾನೀಸ್ ಮಾಸ್ಟರ್‌ಕ್ಲಾಸ್

ಮಣಿಪಾಲ: ಜಪಾನೀಸ್ ಭಾಷೆ ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಯುವಕರಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಉಚಿತ ಜಪಾನೀಸ್ ಮಾಸ್ಟರ್‌ಕ್ಲಾಸ್ ನ್ನು ಜೂನ್ 12ರಂದು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಆಡಿಟೋರಿಯಂನಲ್ಲಿ ಆಯೋಜಿಸಿದೆ.

ಡಾ. ಟಿ.ಎಂ.ಎ. ಪೈ ಫೌಂಡೇಶನ್ ಘಟಕವಾಗಿರುವ MSDC, ಜಪಾನ್‌ನ Chuoh Publishing Co. ಹಾಗೂ KTC Holdings India Private Limited ಸಹಯೋಗದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಏನೇನೆಲ್ಲಾ ಕಲಿಯಬಹುದು?

ಈ ಮಾಸ್ಟರ್‌ಕ್ಲಾಸ್‌ನಲ್ಲಿ ಜಪಾನೀಸ್ ಭಾಷೆಯ ಮೂಲಭೂತ ಅಂಶಗಳಾದ ಹಿರಾಗಾನ, ಕಟಕಾನ ಹಾಗೂ ಪ್ರಾಥಮಿಕ ಕಾಂಜಿ ಅಕ್ಷರಗಳ ಕುರಿತು ತರಬೇತಿ ನೀಡಲಾಗುವುದು. ಭಾಗವಹಿಸುವವರಿಗೆ ಸುಮಾರು 300 ಕಾಂಜಿ ಅಕ್ಷರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕಲಿಯುವ ಅವಕಾಶ ದೊರೆಯಲಿದೆ. ಯಾವುದೇ ಪೂರ್ವಭಾಷಾ ಜ್ಞಾನವಿಲ್ಲದವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಜಪಾನ್‌ನಲ್ಲಿ ಉದ್ಯೋಗ ಹಾಗೂ ಶಿಕ್ಷಣ ಅವಕಾಶಗಳ ಕುರಿತೂ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು. ವಿಶೇಷ ಕೌಶಲ್ಯ ಕಾರ್ಮಿಕರ (SSW) ವೀಸಾ ಮೂಲಕ ಉದ್ಯೋಗಾವಕಾಶಗಳು ಹಾಗೂ ಎಂಜಿನಿಯರ್ ವೀಸಾ ಮೂಲಕ ಜಪಾನ್‌ನಲ್ಲಿ ಅಧ್ಯಯನ ಮತ್ತು ಉದ್ಯೋಗದ ಮಾರ್ಗಗಳ ಕುರಿತು ತಜ್ಞರು ವಿವರಿಸಲಿದ್ದಾರೆ.

ಆಸಕ್ತರು ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8088318437 ಹಾಗೂ 9481806797 ಸಂಪರ್ಕಿಸಿ