ನೀವು ಕಾಫಿ ಪ್ರಿಯರೇ? ಹಾಗಾದ್ರೆ ಕಾಫಿ ಹೀರುವ ಮೊದಲು ಈ ವಿಷ್ಯಗಳು ನಿಮಗೆ ಗೊತ್ತಿರಲಿ

ಕಾಫಿ ಹೀರುತ್ತಾ ಮಧುರ ಕ್ಷಣಗಳನ್ನು ಕಳೆಯುವ ಅಭ್ಯಾಸ ತುಂಬಾ ಮಂದಿಗಿದೆ. ಹಾಗೆಯೇ ಕಾಫಿ ಕುಡಿಯುವ ಚಟ ಕೂಡ ಅಧಿಕ ಮಂದಿಗಿದೆ.ಒಂದು ಕಾಫಿ ಕುಡಿಯೋದು ಎಷ್ಟು ಆರೋಗ್ಯಕರ ಎಂಬುದನ್ನು ಹೇಳ್ತೇವೆ. ಕಾಫಿ ಕುರಿತ ಈ ಸಂಗತಿಗಳು ನಿಮಗೆ ಗೊತ್ತಿರಲಿ.

 ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು.

ಸಂಜೆ ಕಾಫಿ ಕುಡಿಯುವ ಅಭ್ಯಾಸವಿರುವವರು ಲೇಟ್ ಆಗಿ ಕಾಫಿ ಸೇವನೆ ಮಾಡಬಾರದು. ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ನಿದ್ದೆ ಸರಿಯಾಗಿ ಬಾರದೇ ಇರುವ, ನಡು ನಡುವೆ ಎಚ್ಚರಾಗುವ ವ್ಯಕ್ತಿಗಳು ಸಂಜೆಯ ಬಳಿಕ ಎಂದಿಗೂ ಕಾಫಿ ಕುಡಿಯಬಾರದು.

ಈ ಸಂಗತಿಗಳನ್ನು ಗಮನದಲ್ಲಿರಿಸಿ:

ಕಾಫಿ ಹೆಚ್ಚು ಸ್ಟ್ರಾಂಗ್ ಇರಬಾರದು. ಬ್ಯ್ಲಾಕ್ ಕಾಫಿಗಿಂತಲೂ ಕಡಿಮೆ ಕಾಫಿ ಪುಡಿ, ಕೊಂಚ ಬೆಲ್ಲ ಹಾಕಿ ಹಾಲಿನಲ್ಲಿ ಕುದಿಸಿದ ಕಾಫಿಯೇ ಸುರಕ್ಷಿತವಾಗಿದೆ. ಹೆಚ್ಚು ಕಾಫಿ ಪುಡಿ ಹಾಕುವುದು ನಿಮ್ಮ ದೇಹಕ್ಕೆ ಹೆಚ್ಚು ಕೆಫಿನ್ ಅಂಶ ಸೇರಲು ಕಾರಣವಾಗುತ್ತದೆ.

ಕಾಫಿಯನ್ನು ಎಂದಿಗೂ ಬೇರೆ ಆಹಾರಗಳ ಜೊತೆಯಿಲ್ಲದೇ ಸೇವನೆ ಮಾಡಬಾರದು. ಕಾಫಿಯ ಜೊತೆ ಏನಾದರೂ ಇತರ ಆಹಾರಗಳಿರಲಿ. ಟೋಸ್ಟ್, ರಸ್ಕ್, ಬಿಸ್ಕತ್ತು, ಕುರುಕು ತಿಂಡಿ ತಿನ್ನುವುದು ಉತ್ತಮ.

ಬ್ಲ್ಯಾಕ್​ ಕಾಫಿಯೇ ನಿಮಗೆ ಅಭ್ಯಾಸವಾಗಿದ್ದರೆ, ಕೆಫೀನ್ ಜೀರ್ಣಾಂಗಗಳನ್ನು ಒಣಗಿಸುವ ಹಾಗೂ ಆಮ್ಲೀಯತೆಯನ್ನು ಉಂಟು ಮಾಡುವ ಪ್ರಭಾವವನ್ನು ಕಡಿಮೆಗೊಳಿಸಲು ಕೊಂಚ ಬೆಣ್ಣೆ ಅಥವಾ ತುಪ್ಪವನ್ನು ಹಾಕಿ ಕುಡಿಯಿರಿ.

ಮಲಬದ್ದತೆಯಾದಾಗ ಬೆಣ್ಣೆ ಬೆರೆಸಿದ ಬೆಲ್ಲದ ಕಪ್ಪು ಕಾಫಿಯ ಸೇವನೆ ನೈಸರ್ಗಿಕ  ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಗರ್ಭಿಣಿ ಮಹಿಳೆಯರು ಕಾಫಿ ಕುಡಿಯುವ ಅಭ್ಯಾಸವನ್ನು ಬಿಡುವುದು ಒಳಿತು ಎನ್ನುತ್ತಾರೆ ತಜ್ಞರು.

ತಲೆನೋವು ಇದ್ದವರು ಕಾಫಿ ಕುಡಿದರೆ ಬೆಸ್ಟ್. ಕುಡಿದ ಕೆಲವೇ ಕ್ಷಣಗಳಲ್ಲಿ ತಲೆನೋವು ಮರೆ ಮಾಡುವ ಗುಣ ಕಾಫಿಗಿದೆ.