ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಡೆಪ್ಯೂಟಿ ಮ್ಯಾನೇಜರ್ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆ: ಡೆಪ್ಯೂಟಿ ಮ್ಯಾನೇಜರ್
ಹುದ್ದೆಗಳ ಸಂಖ್ಯೆ: 90
ಸ್ಥಳ: ದೇಶದೆಲ್ಲೆಡೆ
ವಿದ್ಯಾರ್ಹತೆ: ಡೆಪ್ಯೂಟಿ ಮ್ಯಾನೇಜರ್ (ತಾಂತ್ರಿಕ) ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿರಬೇಕು. ಡೆಪ್ಯೂಟಿ ಮ್ಯಾನೇಜರ್ (ಎಫ್ ಅಂಡ್ ಎ) ಹುದ್ದೆಗೆ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಅಥವಾ ಸಿಎ, ಎಂಬಿಎ ಮುಗಿಸಿರಬೇಕು.
ವಯೋಮಿತಿ; ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹ 500. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30, 2021
ಹೆಚ್ಚಿನ ಮಾಹಿತಿಗೆ: nhai.gov.in