ಉಡುಪಿ: ಜೆಡಿಎಸ್ ಚುನಾವಣಾ ಉಸ್ತುವಾರಿಗಳ ನೇಮಕ

ಉಡುಪಿ: ಫೆ. 15 ರಂದು ಜನತಾದಳ(ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾ ಕಚೇರಿ ಕುಮಾರಕೃಪಾದಲ್ಲಿ ಚುನಾವಣಾ ಪೂರ್ವಭಾವಿ ಸಭೆ ಜರುಗಿತು. ಕಾರ್ಯಾಧ್ಯಕ್ಷ ವಾಸುದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಕ್ಷದ ನಾಯಕ ಸಂಕಪ್ಪ. ಎ ಇವರು ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಇತ್ತೀಚೆಗೆ ನಿಧನರಾದ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಧ್ಯಕ್ಷ ರಾಜು ಆರ್ ಪುತ್ರನ್ ಅವರಿಗೆ ಪಕ್ಷದ ವತಿಯಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಮಾತನಾಡಿ ಪಂಚರತ್ನ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ಕೆಲಸ ಹಾಗೂ ಕಾರ್ಯಕ್ರಮ ತಯಾರಿಯ ಬಗ್ಗೆ ವಿವರಗಳನ್ನು ನೀಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಿ ಚುನಾವಣಾ ಉಸ್ತುವಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಗೊಳಿಸಲಾಯಿತು.

ಚುನಾವಣಾ ಉಸ್ತುವಾರಿಗಳ ವಿವರ:

118ಬೈಂದೂರು:- ಶ್ರೀಕಾಂತ್ ಅಡಿಗ, ಶ್ರೀಮತಿ ಶಾಲಿನಿ ಬಿ ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹಿಂ, ನಿತಿನ್ ಶೆಟ್ಟಿ, ಗುರುರಾಜ ಶೆಟ್ಟಿ.
119 ಕುಂದಾಪುರ:- ಸುಧಾಕರ ಶೆಟ್ಟಿ, ಶ್ರೀಕಾಂತ ಅಡಿಗ, ಮನ್ಸೂರ್ ಇಬ್ರಾಹಿಂ, ರಮೇಶ್ ಕುಂದಾಪುರ.
120 ಉಡುಪಿ:- ಜಯಕುಮಾರ್ ಪರ್ಕಳ, ವಾಸುದೇವ ರಾವ್, ಗಂಗಾಧರ ಬಿರ್ತಿ, ದಕ್ಷತ್ ಶೆಟ್ಟಿ, ಸಂಜಯ್ ಕುಮಾರ್.
121 ಕಾಪು :-ಸುಧಾಕರ್ ಶೆಟ್ಟಿ, ಉದಯ ಹೆಗ್ಡೆ, ಉಮೇಶ್ ಕರ್ಕೆರ, ವಾಸುದೇವ ರಾವ್, ಚಂದ್ರಹಾಸ ಎರ್ಮಾಳ್, ಸಯ್ಯದ್ ಸಾಹಿದ್.
122 ಕಾರ್ಕಳ:- ಉದಯ ಹೆಗ್ಡೆ ಬ್ಲಾಕ್ , ಜಯರಾಮ ಆಚಾರ್ಯ, ದಕ್ಷತ್ ಆರ್ ಶೆಟ್ಟಿ, ಉದಯ ಆರ್ ಶೆಟ್ಟಿ, ಇಸ್ಮಾಯಿಲ್ ಪಲಿಮಾರ್, ಅಬ್ದುಲ್ ರಝಕ್ ಉಚ್ಚಿಲ.

ಈ ಸಂದರ್ಭ ಸುಧಾಕರ ಶೆಟ್ಟಿ, ಗಂಗಾಧರ ಬಿರ್ತಿ, ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ, ಇಕ್ಬಾಲ್ ಅತ್ರಾಡಿ, ಭರತ್ ಕುಮಾರ್ ಮತ್ತು ಇಸ್ಮಾಯಿಲ್ ಫಲಿಮಾರು, ವೆಂಕಟೇಶ್ ಎಂಟಿ, ಸಂಜಯ್ ಕುಮಾರ್, ಹುಸೇನ್ ಹೈಕಾಡಿ, ಫೈಜಾನ್ ಅಹಮ್ಮದ್ , ರಾಮರಾವ್, ಬಿಕೆ ಹೆಜಮಾಡಿ, ದೇವರಾಜ್ ತೊಟ್ಟಂ, ಶ್ರೀಮತಿ ಹರಿಣಿ ಆರ್ ಕೋಟ್ಯಾನ್, ಶ್ರೀಮತಿ ಮೋಹಿನಿ, ಶಂಶುದ್ದಿನ್, ಪದ್ಮನಾಭ ಆರ್ ಕೋಟ್ಯಾನ್, ರಂಗ ಎನ್ ಕೋಟ್ಯಾನ್ ಮತ್ತಿತರ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

ಉದಯ ಆರ್ ಶೆಟ್ಟಿ ವಂದಿಸಿದರು.