ಬೆಂಗಳೂರು: ಉಡುಪಿಯ ಶಿರೂರು ಮಠಕ್ಕೆ ಪೀಠಾಧಿಪತಿಯನ್ನಾಗಿ ಅಪ್ರಾಪ್ತ ಬಾಲಕನನ್ನು ನೇಮಕ ಮಾಡಲಾಗಿದೆ ಎಂದು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಕೆ ಮಾಡಲಾಗಿರುವ ಪಿಐಎಲ್ ವಿಚಾರಣೆ ಇಂದು ನಡೆಯಿತು.
ಪೀಠಾಧಿಪತಿಯಾಗಿ 16 ವರ್ಷದ ಬಾಲಕನ ನೇಮಕವಾಗಿದೆ. ಈ ನೇಮಕ ಕಾನೂನುಬಾಹಿರವೆಂದು ಅರ್ಜಿದಾರರು ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನ ಮುಂದಿನ ವಾರಕ್ಕೆ ಮುಂದೂಡಿದೆ.
ಅನಿರುದ್ಧ ಸರಳತ್ತಾಯರನ್ನು ಸೋದೆ ವಾದಿರಾಜ ಮಠದಿಂದ ಪೀಠಾಧಿಪತಿ ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಪ್ರಾಪ್ತರ ನೇಮಕ ಮಾಡುವಂತಿಲ್ಲವೆಂದು ಪಿಐಎಲ್ ಮೂಲಕ ನೇಮಕವನ್ನು ಪ್ರಶ್ನಿಸಲಾಗಿತ್ತು.












