ರಂಗಾಯಣದಲ್ಲಿ ನಾಟಕ ಕಲಿಯೋ ಆಸಕ್ತಿ ಇದೆಯೇ: ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಕರ್ನಾಟಕ ಸರ್ಕಾರವು ಮೈಸೂರಿನಲ್ಲಿ  ಸ್ಥಾಪಿಸಿರುವ ರಂಗಾಯಣವು ರಂಗತರಬೇತಿ ಶಾಲೆಯಾಗಿದ್ದು ಪ್ರತಿ ವರ್ಷ ಹತ್ತು ತಿಂಗಳ ಡಿಪ್ಲೊಮಾ ಕೋರ್ಸನ್ನು ನಡೆಸುತ್ತಾ ಬಂದಿದೆ.

ಪ್ರಸ್ತುತ 2020-21 ನೇ ಸಾಲಿನ ರಂಗ ತರಬೇತಿ ಕೋಸ್ ð ಗೆ ಸೇರಬಯಸುವ ವಿದ್ಯಾರ್ಥಿಗಳು  ಕನಿಷ್ಠ   ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆತೇರ್ಗಡೆ ಹೊಂದಿರಬೇಕು.ಅರ್ಜಿ ಸಲ್ಲಿಸಲು  18 ವರ್ಷ ತುಂಬಿದ ಮತ್ತು 28 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.  ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಾಮನುಸಾರ ರಂಗಾಯಣದಿAದಲೇ ವಸತಿ ವ್ಯವಸ್ಥೆ ,ಕಲ್ಪಿಸಲಾಗುವುದು. ಮತ್ತು ಮಾಹೆಯಾನ ರೂ.3,000/-ಗಳ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ರೂ.2.000/-ಗಳ ಊಟೋಪಚಾರದ ಭತ್ಯೆ ಪಾವತಿಸಲಾಗುವುದು.

ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ಜೂನ್ 25 ರಿಂದ ರಂಗಾಯಣದ ವೆಬ್ ಸೈಟ್.ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿ ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು  ಸಲ್ಲಿಸಬಹುದು.

ಹೆಚ್ಚಿನ ವಿವರಕ್ಕಾಗಿ ದೂರವಾಣೆ ಸಂಖ್ಯೆ :0821-2512639,9448938661,9916600027,ಮತ್ತು 9448422343 ನ್ನು ಸಂಪರ್ಕಿಸಬಹುದು ಎಂದು ರಂಗಾಯಣದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.