ಮಂಗಳೂರು: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶುಶ್ರೂಷಕರ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಿಂಗಳಿಗೆ ಗರಿಷ್ಠ 2 ಲಕ್ಷ ರೂ.ಗಳ ವೇತನದೊಂದಿಗೆ 3 ತಿಂಗಳು ಉಚಿತ ವಸತಿ ವ್ಯವಸ್ಥೆ ನೀಡಲಾಗುವುದು. ಬಿ.ಎಸ್ಸಿ ನರ್ಸಿಂಗ್, ಜಿಎನ್‌ಎಮ್ ಹಾಗೂ ಪಿಬಿಬಿ.ಎಸ್ಸಿ ನರ್ಸಿಂಗ್‌ನಲ್ಲಿ 6 ತಿಂಗಳು ಮತ್ತು ಮೇಲ್ಪಟ್ಟ ಅನುಭವ ಹೊಂದಿದ್ದು, ಐಇಎ ಟಿಎಸ್-ಬಾನ್ಡ್ 7 ಅಥವಾ ಒಇಟಿ-ಗ್ರೇಡ್ ಬಿ, ಅರ್ಹತೆ ಹೊಂದಿದ್ದು, ಗರಿಷ್ಠ 50 ವರ್ಷದವರಾಗಿರಬೇಕು.
ಆಸಕ್ತರು ಕಚೇರಿ ದಿನಗಳಲ್ಲಿ ಅಶೋಕ ನಗರದಲ್ಲಿರುವ ಉರ್ವ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಎಚ್.ಆರ್. ಕೋರ್ಡಿನೇಟರ್ (ಎಚ್.ಆರ್. ಕೋ. ಆರ್ಡಿನೇಟರ್) ಅವರ ಮೊಬೈಲ್ ಸಂಖ್ಯೆ 9110248485 ಅನ್ನು ಸಂಪರ್ಕಿಸುವಂತೆ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.