ಅವಿಭಜಿತ ದ.ಕ ಜಿಲ್ಲೆಯಲ್ಲಿ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು/ಉಡುಪಿ: ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹತ್ತನೇ ತರಗತಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಮಂಗಳೂರು ವಿಭಾಗದಲ್ಲಿ 95 ಸೇರಿದಂತೆ ಅವಿಭಜಿತ ದ.ಕ ಜಿಲ್ಲೆಯಲ್ಲಿ ಒಟ್ಟು 273 ಹುದ್ದೆಗಳಿವೆ.

ಅರ್ಜಿಗಳನ್ನು https://indiapostgdsonline.gov.in ಗೆ ಫೆಬ್ರವರಿ 16 ರೊಳಗೆ ಸಲ್ಲಿಸಬೇಕು. ಅಭ್ಯರ್ಥಿಯ ವಯಸ್ಸು 18 ರಿಂದ 40 ವಯೋಮಿತಿಯೊಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ https://indiapost.gov.in ಗೆ ಲಾಗಿನ್ ಆಗಬಹುದು.