ಲೈಬ್ರರಿ ಸಹಾಯಕರ ಹುದ್ದೆಗೆ ಬೆಂಗಳೂರಿನ ಟಾಟಾ ಸಂಸ್ಥೆಯಲ್ಲಿ ಅರ್ಜಿ ಆಹ್ವಾನ; 55 ಸಾವಿರ ರೂವರೆಗೆ ವೇತನ

ಲೈಬ್ರರಿ ಟ್ರೈನಿ, ಕ್ಲರ್ಕ್​ ಟ್ರೈನಿ ಸೇರಿದಂತೆ ಒಟ್ಟು ನಾಲ್ಕು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಸೈನ್ಸ್​ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದೆ.

ಬೆಂಗಳೂರಿನಲ್ಲಿರುವ ಟಾಟಾ ಇನ್ಸುಟಿಟ್ಯೂಟ್​ ಆಫ್​ ಫಂಡಮೆಂಟಲ್​ ರಿಸರ್ಚ್​ (ಟಿಐಎಫ್​ಆರ್​)ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಲೈಬ್ರರಿ ಸೈನ್ಸ್​ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆ ವಿವರ: ಲೈಬ್ರರಿ ಟ್ರೈನಿ, ಕ್ಲರ್ಕ್​ ಟ್ರೈನಿ, ಇಂಜಿನಿಯರ್​​ ಟ್ರೈನಿ, ಟೆಪರೊರಿ ಸೈಂಟಿಫಿಕ್​ ಅಸಿಸ್ಟೆಂಟ್​ ಬಿ ಈ ಎಲ್ಲ ಹುದ್ದೆಗಳಿಗೆ ತಲಾ ಒಬ್ಬ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುವುದು.

ವಿದ್ಯಾರ್ಹತೆ: ಲೈಬ್ರರಿ ಟ್ರೈನಿ: ಬಿಎಸ್ಸಿ ಮತ್ತು ಬಿಲಿಬ್​ ಪದವಿ ಅಥವಾ ಎಂಲಿಬ್​ ಪದವಿ – 22 ಸಾವಿರ ರೂ ಮಾಸಿಕ ವೇತನ
ಕ್ಲರ್ಕ್​ ಟ್ರೈನಿ: ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನ – 22 ಸಾವಿರ ರೂ ಮಾಸಿಕ ವೇತನ
ಇಂಜಿನಿಯರ್​ ಟ್ರೈನಿ: ಐಟಿ ಅಥವಾ ಐಎಸ್​ ಅಥವಾ ಟೆಲಿ ಕಮ್ಯೂನಿಕೇಷನ್​ನಲ್ಲಿ ಬಿಟೆಕ್​, ಬಿಇ ಪದವಿ – 35 ಸಾವಿರ ಮಾಸಿಕ ವೇತನ
ಟೆಂಪರರಿ ಸೈಂಟಿಫಿಕ್​ ಅಸಿಸ್ಟೆಂಟ್​​: ಲೈಬ್ರಿರಿ ಸೈನ್ಸ್​ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ- 55,600 ರೂ ಮಾಸಿಕ ವೇತನ
ವಿಶೇಷ ಸೂಚನೆ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕ ಮಾಡಲಾಗುತ್ತಿದೆ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕಂಪ್ಯೂಟರ್​ ಜ್ಞಾನ ಜೊತೆಗೆ ಲಟೆಕ್ಸ್​​ ಟೈಪಿಂಗ್​ ಕೌಶಲ್ಯವನ್ನು ಹೊಂದಿರಬೇಕು. ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಆಗಿದೆ. ಟಿಐಆರ್​ಎಫ್​ ನಿಯಮ ಅನುಸಾರ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಟಾಟಾ ಇನ್ಸ್​ಟಿಟ್ಯೂಟ್​ ಆಫ್​ ಫಂಡಮೆಂಟಲ್​ ರಿಸರ್ಚ್​​, ಸೆಂಟರ್​ ಫಾರ್​ ಅಪ್ಲಿಕೇಬಲ್​ ಮ್ಯಾಥಮೆಟಿಕ್ಸ್​​, ಪೋಸ್ಟ್​ ಬಾಕ್ಸ್​ ನಂ 6503, ಜಿಕೆವಿಕೆ ಪೋಸ್ಟ್​​ ಆಫೀಸ್​, ಶಾರಾದಾ ನಗರ್​​, ಚಿಕ್ಕಬೊಮ್ಮಸಂದ್ರ, ಬೆಂಗಳೂರು 560065. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಈ tifr.res.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಆಯ್ಕೆ ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್​ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇದಾದ ಬಳಿಕ ಅಪ್ಲಿಕೇಷನ್​ ಪ್ರಿಂಟ್​ ಪಡೆದು ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಿದೆ. ಆನ್​ಲೈನ್​ ಅರ್ಜಿ ಸಲ್ಲಿಕೆಗೆ 10 ಜುಲೈ ಕಡೆಯ ದಿನವಾದರೆ, ದಾಖಲಾತಿಗಳನ್ನು ಆಫ್​ಲೈನ್​ ಮೂಲಕ ಕಳುಹಿಸಲು ಜುಲೈ 15 ಕಡೆಯ ದಿನವಾಗಿದೆ.